ಪ್ರಸ್ತುತ ‘ಜಗದ್ವಿಖ್ಯಾತ ವಿಜ್ಞಾನಿಗಳು’ ಕನ್ನಡದಲ್ಲಿ ಒಂದು ವಿಶಿಷ್ಟ ಕೃತಿ. ವಿಜ್ಞಾನಿಗಳ ಸಂಶೋಧನೆಗಳನ್ನು ದಾಖಲಿಸಿದ್ದಾರೆ. ಇದೊಂದು ವಿಜ್ಞಾನ ಲೋಕದ ಅದ್ಭುತ ಆವಿಷ್ಕಾರಗಳಾಗಿವೆ. ಇವು ನಿರಂತರ ಜ್ಞಾನ ಸಂವರ್ಧನೆಗೆ ಸಹಕಾರಿ ಯಾಗಿವೆ. ಪ್ರೌಢ ಪ್ರಬುದ್ಧ ಚಿಂತನೆಗೆ ಇಂಬು ಕೊಡುವ ಈ ಕೃತಿ ನಿಜಕ್ಕೂ ಅರಿವಿನ ಆಗರವಾಗಿದೆ. ವಿಜಯಮಾಲಾ ಅವರ ಸಾಹಿತ್ಯ ಸಾಧನೆಯ ಹಿರಿಮೆಗೆ ಗರಿಮೆ ಮೂಡಿಸಿದೆ.
- ಡಾ. ಮರಳಿ ವಸಂತ ಕುಮಾರ್
ಶ್ರೇಷ್ಠ ಸಾಹಿತಿ, ಮನುಕುಲದ ಮಾತುಗಾರ.
ಜ್ಞಾನವೆಂಬುದು ಇದು ನಿಂತ ನೀರಲ್ಲ. ನಿರಂತರವಾಗಿ ಪ್ರವಹಿಸುವ ವಾಹಿನಿ. ಅಂತೆಯೇ ವಿಶೇಷ ಜ್ಞಾನ ವಿಜ್ಞಾನವೆನಿಸಿದೆ. ನೂರಾರು ಮಹಾವಿಜ್ಞಾನಿಗಳು ವಿಜ್ಞಾನವೆಂಬ ವೃಕ್ಷವನ್ನು ನೀರೆರೆದು ಪೋಷಿಸಿದ್ದಾರೆ. ಭಾರತೀಯ ಮತ್ತು ಪಾಶ್ಚಾತ್ಯ ವಿಜ್ಞಾನಿಗಳ ಹಿಂದೆ ಸುಮಾರು ಐದು ಸಾವಿರ ವರ್ಷದ ಇತಿಹಾಸವಿದೆ. ವಿಜ್ಞಾನಿಗಳ ಸಂಶೋಧನೆಗಳ ಹಿಂದೆ ಅವರ ಸತತ ಪರಿಶ್ರಮ, ಸಂಯಮ, ತಾಳ್ಮೆಗಳಿರುತ್ತವೆ. ನಿರೀಕ್ಷಿಸಿದ ಫಲಿತಾಂಶ ಸಿಗುವವರೆಗೂ ಶತಾಯಗತಾಯ ಪ್ರಯತ್ನ ಮಾಡಿ ಸಂಶೋಧನೆ ನಡೆಸುತ್ತಲೇ ಇರುತ್ತಾರೆ. ಸತ್ಯದ ನಿಜಸ್ವರೂಪ ತಿಳಿದಾಗಲೇ ಅವರಿಗೆ ಆತ್ಮತೃಪ್ತಿ.
ನೂರಾರು ವಿಜ್ಞಾನಿಗಳು ರಸಾಯನಶಾಸ್ತç, ಭೌತಶಾಸ್ತç, ಖಗೋಳ ಶಾಸ್ತç, ಗಣಿತಶಾಸ್ತç, ಜೀವಶಾಸ್ತç, ಕೃಷಿ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅಂತಹ ಪ್ರತಿಭಾವಂತ ವಿಜ್ಞಾನಿಗಳ ಸಂಶೋಧನೆ, ಮನೋಧರ್ಮ, ದೇಶ, ಕಾಲ, ಹವ್ಯಾಸಗಳನ್ನು ಪರಿಚಯಿಸುವುದು ನನ್ನ ಈ ಕೃತಿಯ ಉz್ದೆÃಶ. ಪ್ರಸ್ತುತ ಕೃತಿ ನಾನು ಈ ಹಿಂದೆ ಬರೆದ ವಿಶ್ವವಿಜ್ಞಾನ ವಿಸ್ಮಯ ಮತ್ತು ವಿಜ್ಞಾನೇತಿಹಾಸ ದರ್ಶನÀ ನಂತರದ ಮೂರನೇ ವಿಜ್ಞಾನ ಕೃತಿಯಾಗಿದೆ. ಎಂದಿನAತೆ ವಾಚಕರು ನನ್ನ ಈ ಕೃತಿಯನ್ನು ಅಧ್ಯಯನ ಮಾಡಿ ಮೆಚ್ಚುವರೆಂಬ ಭರವಸೆ ನನಗಿದೆ.
ಈ ಕೃತಿಗೆ ಸೂಕ್ತವಾದ ಶೀರ್ಷಿಕೆಯನ್ನು ಕೊಟ್ಟು ನನ್ನನ್ನು ಮನಸಾರೆ ಆಶೀರ್ವದಿಸಿರುವ ನಮ್ಮ ಕುಟುಂಬದ ಹಿರಿಯ ಸಹೋದರರಂತಿರುವ ಸಾಗರದ ಶ್ರೇಷ್ಠ ಸಾಹಿತಿ ಪ್ರೊಫೆಸರ್ ವಿ. ಗಣೇಶ್ ಸರ್ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿz್ದÉÃನೆ. ಈ ಕೃತಿಯನ್ನು ಮುದ್ರಿಸುವ ಹೊಣೆ ಹೊತ್ತು ಅಚ್ಚುಕಟ್ಟಾಗಿ ಹೊರ ತಂದಿರುವ ಪ್ರಕೃತಿ ಅವಳಿ ಪ್ರಕಾಶಕರಾದ ಶ್ರೀ ಶಿವರಾಮ್ ಮತ್ತು ಶ್ರೀ ಕೇಶವ ಸಹೋದರರಿಗೆ ನಾನು ಅಭಾರಿಯಾಗಿz್ದÉÃನೆ.
-ಕಲಾಶ್ರೀ ಡಾ|| ವಿಜಯಮಾಲಾ ರಂಗನಾಥ್