JAGADHVIKHYATHA VIGNANIGALU

· KK PRINTERS &PUBLISHERS
eBook
216
หน้า
คะแนนและรีวิวไม่ได้รับการตรวจสอบยืนยัน  ดูข้อมูลเพิ่มเติม

เกี่ยวกับ eBook เล่มนี้

ಸಾಹಿತ್ಯ ಸೇವೆಯನ್ನು ಒಂದು ತಪಸ್ಸೆಂದು ಭಾವಿಸಿ ಪವಿತ್ರ ಭಾವನೆಯಿಂದ ಅನವರತ ದುಡಿಯುವ ಶ್ರದ್ಧಾನ್ವಿತÀ ವರ್ಗಕ್ಕೆ ಸೇರಿದವರು ಡಾ. ವಿಜಯಮಾಲಾ ರಂಗನಾಥ ಅವರು, ಕವಿತೆ, ವಿಮರ್ಶೆ, ಪ್ರವಾಸ ಸಾಹಿತ್ಯ, ಹಾಸ್ಯ ಸಾಹಿತ್ಯ, ಪ್ರಬಂಧ ಸಾಹಿತ್ಯ, ಜೀವನ ಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸಮಾಡಿರುವ ಮಾಲಾ ಅವರು ಗಮಕ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನ ಮಾಡಿ ಕನ್ನಡದಲ್ಲಿ ಮೊತ್ತ ಮೊದಲು ಡಾಕ್ಟರೇಟ್ ಪಡೆದಿದ್ದಾರೆ. ಇವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಮೌಲಿಕ ಕೃತಿಗಳನ್ನು ರಚಿಸಿ ಸಂಕೀರ್ಣ ಸಾಧನೆ ಮಾಡಿದ್ದಾರೆ.

ಪ್ರಸ್ತುತ ‘ಜಗದ್ವಿಖ್ಯಾತ ವಿಜ್ಞಾನಿಗಳು’ ಕನ್ನಡದಲ್ಲಿ ಒಂದು ವಿಶಿಷ್ಟ ಕೃತಿ. ವಿಜ್ಞಾನಿಗಳ ಸಂಶೋಧನೆಗಳನ್ನು ದಾಖಲಿಸಿದ್ದಾರೆ. ಇದೊಂದು ವಿಜ್ಞಾನ ಲೋಕದ ಅದ್ಭುತ ಆವಿಷ್ಕಾರಗಳಾಗಿವೆ. ಇವು ನಿರಂತರ ಜ್ಞಾನ ಸಂವರ್ಧನೆಗೆ ಸಹಕಾರಿ ಯಾಗಿವೆ. ಪ್ರೌಢ ಪ್ರಬುದ್ಧ ಚಿಂತನೆಗೆ ಇಂಬು ಕೊಡುವ ಈ ಕೃತಿ ನಿಜಕ್ಕೂ ಅರಿವಿನ ಆಗರವಾಗಿದೆ. ವಿಜಯಮಾಲಾ ಅವರ ಸಾಹಿತ್ಯ ಸಾಧನೆಯ ಹಿರಿಮೆಗೆ ಗರಿಮೆ ಮೂಡಿಸಿದೆ.

- ಡಾ. ಮರಳಿ ವಸಂತ ಕುಮಾರ್

ಶ್ರೇಷ್ಠ ಸಾಹಿತಿ, ಮನುಕುಲದ ಮಾತುಗಾರ.

เกี่ยวกับผู้แต่ง

ಜ್ಞಾನವೆಂಬುದು ಇದು ನಿಂತ ನೀರಲ್ಲ. ನಿರಂತರವಾಗಿ ಪ್ರವಹಿಸುವ ವಾಹಿನಿ. ಅಂತೆಯೇ ವಿಶೇಷ ಜ್ಞಾನ ವಿಜ್ಞಾನವೆನಿಸಿದೆ. ನೂರಾರು ಮಹಾವಿಜ್ಞಾನಿಗಳು ವಿಜ್ಞಾನವೆಂಬ ವೃಕ್ಷವನ್ನು ನೀರೆರೆದು ಪೋಷಿಸಿದ್ದಾರೆ. ಭಾರತೀಯ ಮತ್ತು ಪಾಶ್ಚಾತ್ಯ ವಿಜ್ಞಾನಿಗಳ ಹಿಂದೆ ಸುಮಾರು ಐದು ಸಾವಿರ ವರ್ಷದ ಇತಿಹಾಸವಿದೆ. ವಿಜ್ಞಾನಿಗಳ ಸಂಶೋಧನೆಗಳ ಹಿಂದೆ ಅವರ ಸತತ ಪರಿಶ್ರಮ, ಸಂಯಮ, ತಾಳ್ಮೆಗಳಿರುತ್ತವೆ. ನಿರೀಕ್ಷಿಸಿದ ಫಲಿತಾಂಶ ಸಿಗುವವರೆಗೂ ಶತಾಯಗತಾಯ ಪ್ರಯತ್ನ ಮಾಡಿ ಸಂಶೋಧನೆ ನಡೆಸುತ್ತಲೇ ಇರುತ್ತಾರೆ. ಸತ್ಯದ ನಿಜಸ್ವರೂಪ ತಿಳಿದಾಗಲೇ ಅವರಿಗೆ ಆತ್ಮತೃಪ್ತಿ.

ನೂರಾರು ವಿಜ್ಞಾನಿಗಳು ರಸಾಯನಶಾಸ್ತç, ಭೌತಶಾಸ್ತç, ಖಗೋಳ ಶಾಸ್ತç, ಗಣಿತಶಾಸ್ತç, ಜೀವಶಾಸ್ತç, ಕೃಷಿ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅಂತಹ ಪ್ರತಿಭಾವಂತ ವಿಜ್ಞಾನಿಗಳ ಸಂಶೋಧನೆ, ಮನೋಧರ್ಮ, ದೇಶ, ಕಾಲ, ಹವ್ಯಾಸಗಳನ್ನು ಪರಿಚಯಿಸುವುದು ನನ್ನ ಈ ಕೃತಿಯ ಉz್ದೆÃಶ. ಪ್ರಸ್ತುತ ಕೃತಿ ನಾನು ಈ ಹಿಂದೆ ಬರೆದ ವಿಶ್ವವಿಜ್ಞಾನ ವಿಸ್ಮಯ ಮತ್ತು ವಿಜ್ಞಾನೇತಿಹಾಸ ದರ್ಶನÀ ನಂತರದ ಮೂರನೇ ವಿಜ್ಞಾನ ಕೃತಿಯಾಗಿದೆ. ಎಂದಿನAತೆ ವಾಚಕರು ನನ್ನ ಈ ಕೃತಿಯನ್ನು ಅಧ್ಯಯನ ಮಾಡಿ ಮೆಚ್ಚುವರೆಂಬ ಭರವಸೆ ನನಗಿದೆ.

ಈ ಕೃತಿಗೆ ಸೂಕ್ತವಾದ ಶೀರ್ಷಿಕೆಯನ್ನು ಕೊಟ್ಟು ನನ್ನನ್ನು ಮನಸಾರೆ ಆಶೀರ್ವದಿಸಿರುವ ನಮ್ಮ ಕುಟುಂಬದ ಹಿರಿಯ ಸಹೋದರರಂತಿರುವ ಸಾಗರದ ಶ್ರೇಷ್ಠ ಸಾಹಿತಿ ಪ್ರೊಫೆಸರ್ ವಿ. ಗಣೇಶ್ ಸರ್ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿz್ದÉÃನೆ. ಈ ಕೃತಿಯನ್ನು ಮುದ್ರಿಸುವ ಹೊಣೆ ಹೊತ್ತು ಅಚ್ಚುಕಟ್ಟಾಗಿ ಹೊರ ತಂದಿರುವ ಪ್ರಕೃತಿ ಅವಳಿ ಪ್ರಕಾಶಕರಾದ ಶ್ರೀ ಶಿವರಾಮ್ ಮತ್ತು ಶ್ರೀ ಕೇಶವ ಸಹೋದರರಿಗೆ ನಾನು ಅಭಾರಿಯಾಗಿz್ದÉÃನೆ.

-ಕಲಾಶ್ರೀ ಡಾ|| ವಿಜಯಮಾಲಾ ರಂಗನಾಥ್

ให้คะแนน eBook นี้

แสดงความเห็นของคุณให้เรารับรู้

ข้อมูลในการอ่าน

สมาร์ทโฟนและแท็บเล็ต
ติดตั้งแอป Google Play Books สำหรับ Android และ iPad/iPhone แอปจะซิงค์โดยอัตโนมัติกับบัญชีของคุณ และช่วยให้คุณอ่านแบบออนไลน์หรือออฟไลน์ได้ทุกที่
แล็ปท็อปและคอมพิวเตอร์
คุณฟังหนังสือเสียงที่ซื้อจาก Google Play โดยใช้เว็บเบราว์เซอร์ในคอมพิวเตอร์ได้
eReader และอุปกรณ์อื่นๆ
หากต้องการอ่านบนอุปกรณ์ e-ink เช่น Kobo eReader คุณจะต้องดาวน์โหลดและโอนไฟล์ไปยังอุปกรณ์ของคุณ โปรดทำตามวิธีการอย่างละเอียดในศูนย์ช่วยเหลือเพื่อโอนไฟล์ไปยัง eReader ที่รองรับ