A Kannada book by Akshara Prakashana / ಅಕ್ಷರ ಪ್ರಕಾಶನ
ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ಎಂ.ಕಾಂ., ಹಿಂದೀ ಸಾಹಿತ್ಯರತ್ನ ಮತ್ತು ಯಕ್ಷಗಾನದಲ್ಲಿ ಪಿಎಚ್.ಡಿ. ಪದವೀಧರ. ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಸೇವೆ. ತಾಳಮದ್ದಲೆ ರಂಗದ ಪ್ರಮುಖ ಅರ್ಥದಾರಿಗಳಲ್ಲೊಬ್ಬರು. ಯಕ್ಷಗಾನ ವಿಮರ್ಶಕ, ಸಂಶೋಧಕ, ಸಂಘಟಕ, ಪ್ರವಚನಕಾರ, ಅಂಕಣಕಾರ, ಕವಿ. ಆಸಕ್ತಿಯ ಕ್ಷೇತ್ರಗಳು - ಅರ್ಥಶಾಸ್ತ್ರ, ತತ್ತ್ವಶಾಸ್ತ್ರ, ಕಲೆ, ಸಾಹಿತ್ಯ, ಶಿಕ್ಷಣ, ಸಮಾಜಕಾರ್ಯ, ಹಲವು ಸಂಘಸಂಸ್ಥೆಗಳೊಂದಿಗೆ ಸಕ್ರಿಯ ಸಂಪರ್ಕ. ಯಕ್ಷಗಾನ ಕುರಿತು ಹತ್ತು ವಿಮರ್ಶಾ ಕೃತಿಗಳೂ, ಸಂಪಾದಿತ ಕೃತಿಗಳೂ, ನೂರಾರು ಬಿಡಿಬರಹಗಳೂ ಪ್ರಕಟವಾಗಿವೆ.
ಮೂಲತಃ ಉತ್ತರ ಕನ್ನಡ ಸಿದ್ಧಾಪುರದ ಜೋಗಿನ್ಮನೆಯವರು. ಸಂಸ್ಕೃತದಲ್ಲಿ ಎಂ. ಎ. ಪದವೀಧರರು. ಸಿದ್ಧಾಪುರದ ಮಹಾತ್ಮಾಗಾಂಧೀ ಶತಾಬ್ದಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ಪ್ರಾಂಶುಪಾಲರಾಗಿ ಸೇವೆ. ಯಕ್ಷಗಾನ ಅರ್ಥದಾರಿ, ಪ್ರಸಂಗಕರ್ತ, ವೇಷಧಾರಿ. ತತ್ತ್ವಶಾಸ್ತ್ರ, ಅಲಂಕಾರಶಾಸ್ತ್ರ, ಮೊದಲಾದ ಶಾಸ್ತ್ರೀಯ ವಿಷಯಗಳಲ್ಲಿ ಇವರ ಕೆಲವು ಗ್ರಂಥಗಳೂ, ಹಲವು ಲೇಖನಗಳೂ ಪ್ರಕಟವಾಗಿವೆ. ಹದಿನೈದು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.