ನಾನು ಹಾಸ್ಯ ಸಾಹಿತ್ಯಕ್ಕೆ ಬರೆದ ನಾಲ್ಕು ಕೃತಿಗಳ ನಂತರ ಇದು ಐದನೆಯ ಕುಸುಮ ಕೃತಿಯಾಗಿದೆ. ವಾಚಕರಿಗೆ ಆಪ್ಯಾಯಮಾನವೆನಿಸಿದ ಕಾರಣ ಈ ಕೃತಿ ರಚಿಸಿದ್ದೇನೆ. ನಾನು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನಾಲ್ಕನೇ ಹಾಸ್ಯ ಕೃತಿಯನ್ನು ತಿರುವಿ ಹಾಕಿದ ಸಹ ಪ್ರಯಾಣಿಕರೊಬ್ಬರು ನನಗೆ ಕೊಟ್ಟ ಸಲಹೆ ಪ್ರಕಾರ ಕೃತಿಯ ತುಂಬಾ ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡಿದ್ದೇನೆ. ಅವು ಕಾಲ್ಪನಿಕವಾಗಿದ್ದು ಯಾವುದೇ ಹೆಸರನ್ನು ಉದ್ದೇಶ ಪೂರ್ವಕವಾಗಿ ಸೇರಿಸಿಲ್ಲ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಬಯಸುತ್ತೇನೆ. ಬರಹದಲ್ಲಿ ಬದಲಾವಣೆಯಿರಲೆಂಬುದು ನನ್ನ ಸ್ವಂತ ಅನಿಸಿಕೆಯಾಗಿದೆ. ಚಿಕ್ಕಂದಿನಿAದಲೂ ಹಾಸ್ಯದ ಸಂಭಾಷಣೆಗಳನ್ನು ಬರೆದಿರುವುದನ್ನು ಅಭ್ಯಾಸಮಾಡಿಸಿ ಅವುಗಳನ್ನು ಸಮಯಾನುಸಾರ ಹೇಳುವ ಹವ್ಯಾಸವನ್ನು ನನ್ನಲ್ಲಿ ಬಿತ್ತಿ ಬೆಳೆಸಿದ ನನ್ನ ತಂದೆಯವರಾದ ಸ್ಕಾಲರ್‌ಷಿಪ್ ಶಂಕರಪ್ಪ ನವರನ್ನು ಭಕ್ತಿಪೂರ್ವಕವಾಗಿ ನೆನೆಯುತ್ತೇನೆ.
ಪ್ರಸ್ತುತ ಕೃತಿ ಶಿರೋತಿಲಕವನ್ನು ಮಾರ್ಗದರ್ಶನಮಾಡಿ ನನ್ನನ್ನು ಹರಸಿರುವ ನಾಡಿನ ಖ್ಯಾತ ವಿದ್ವಾಂಸರು ಮತ್ತು ನನ್ನ ಗುರುಗಳಾದ ಡಾ|| ಮಳಲಿ ವಸಂತಕುಮಾರ್ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಕೃತಿಗೆ ಹಿನ್ನುಡಿಯನ್ನು ಬರೆದು ಕೊಟ್ಟು ನನ್ನನ್ನು ಹಾರೈಸಿರುವ ಯಕ್ಷಗಾನದ ಘನ ವಿದ್ವಾಂಸರಾದ ಪ್ರೊ. ಜಿ.ಎಸ್. ಭಟ್ಟ ಅವರಿಗೆ ಆಭಾರಿಯಾಗಿದ್ದೇನೆ. ಪ್ರಸ್ತುತ ಕೃತಿಯನ್ನು ಮೈಸೂರಿನ ಜೆ.ಎಸ್.ಎಸ್. ಅರ್ಯುವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕ ಮತ್ತು ತಜ್ಞವೈದ್ಯರಾದ ಡಾ.ಬಿ.ಬಸವರಾಜ ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿದ್ದೇನೆ.
ಈ ಕೃತಿಯ ಮುದ್ರಣದ ಹೊಣೆಯನ್ನು ಹೊತ್ತು ಅಚ್ಚುಕಟ್ಟಾಗಿ ಪ್ರಕಾಶಿಸಿರುವ ಪ್ರಕೃತಿ ಪಬ್ಲಿಕೇಷನ್ ಅವಳಿ ಮಾಲೀಕರಾದ ಶ್ರೀ ಶಿವರಾಂ ಮತ್ತು ಶ್ರೀ ಕೇಶವ್ ಅವರಿಗೆ ಆಭಾರಿಯಾಗಿದ್ದೇನೆ. ಈ ಕೃತಿಯ ಮುಖಪುಟವನ್ನು ಅಂದವಾಗಿ ರಚಿಸಿದ ಆನಂದ್ ಅವರಿಗೆ ವಂದನೆಗಳು ನನ್ನ ಈ ಕೃತಿಯನ್ನು ಎಂದಿನAತೆ ಓದಿ ಮೆಚ್ಚಿ ನನ್ನನ್ನು ಪ್ರೋತ್ಸಾಯಿಸಿದ ಎಲ್ಲ ಸಹೃದಯ ಬಂಧು ಬಾಂಧವರಿಗೆ ಸ್ನೇಹ ವಲಯಕ್ಕೆ ನನ್ನ ಹೃತ್ಪೂರ್ವಕ ನಮನಗಳು.
- ವಿಜಯಮಾಲಾ ರಂಗನಾಥ್