Nuro Therapay

· KK PRINTERS &PUBLISHERS
5.0
1 条评价
电子书
114
评分和评价未经验证  了解详情

关于此电子书

ಲೇಖಕಿಯ ಮಾತು

ಶಿವಮೊಗ್ಗ ಜಿಲ್ಲೆಯ ಸಾಗರ ಸಾಹಿತ್ಯ ಸಂಸ್ಕೃತಿಗಳ ತವರೂರು. ಬುದ್ಧಿಜೀವಿಗಳ ತವರೆಂದರೆ ತಪ್ಪಾಗಲಾರದು. ಸ್ಕಾಲರ್‌ಶಿಪ್ ಶಂಕರಪ್ಪ ನವರೆಂದು ಹೆಸರಾದ ನನ್ನ ತಂದೆಯವರು ವೃತ್ತಿನಿರತರಾಗಿದ್ದಾಗ ಐದು ವರ್ಷಗಳು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ರಾಗಿದ್ದರು. ಆ ಅವಧಿಯಲ್ಲಿ ಇಲ್ಲಿ ಗಮಕ ವಾಚನವನ್ನು ಪರಿಚಯಿಸಿ ಸಂಘವೊAದನ್ನು ಸ್ಥಾಪಿಸಿದರು. 

ಇತ್ತೀಚೆಗೆ ಸಾಗರದ ಮಲೆನಾಡು ಗಮಕ ಸಂಘದಲ್ಲಿ ಕಾವ್ಯವಾಚನ ಕಾರ್ಯಕ್ರಮ ನೀಡಲು ಹೋದ ಸಂದರ್ಭದಲ್ಲಿ ಶ್ರೋತೃವಾಗಿ ಆಗಮಿಸಿದ್ದ ಡಾ|| ರಘುಪತಿಯವರ ಪರಿಚಯವಾಯಿತು. ಅವರ ಆಹ್ವಾನದ ಮೇರೆಗೆ ಅವರ ಅಕ್ಷತ ನ್ಯೂರೋಥೆೆರಪಿ ಕೇಂದ್ರಕ್ಕೆ ಭೇಟಿ ನೀಡಿದೆ. 

ನನಗೆ ಆಲೋಪತಿ, ಆಯುರ್ವೇದಿಕ್, ಹೋಮಿಯೋಪತಿ, ಫಿಸಿಯೋಥೆರಪಿಗಳ ಬಗ್ಗೆ ಮಾತ್ರ ಪರಚಯವಿತ್ತು. ನ್ಯೂರೋಥೆರಪಿ ಪದವೇ ನನಗೆ ಹೊಸದೆನಿಸಿ ಕುತೂಹಲದಿಂದ ಡಾ| ರಘುಪತಿಯವರನ್ನು ಪ್ರಶ್ನಿಸಿದೆ. ಅವರು ಆ ಚಿಕಿತ್ಸೆಯನ್ನು ಆಮೂಲಾಗ್ರವಾಗಿ ಆತ್ಮೀಯವಾಗಿ ವಿವರಿಸಿದರು. ಇದರ ಬಗ್ಗೆ ಪ್ರಕಟಗೊಂಡಿರುವ ಒಂದೆರಡು ಲೇಖನಗಳು ಮತ್ತು ಇದರ ವಿಚಾರವಿರುವ ಇಂಗ್ಲಿಷ್ ಹಾಗೂ ಹಿಂದಿ ಪುಸ್ತಕಗಳನ್ನು ಪರಿಚಯಿಸಿದರು. ಇದರ ಬಗ್ಗೆ ಪೂರ್ಣ ಪ್ರಮಾಣದ ಪುಸ್ತಕವಿಲ್ಲವೆಂದು ತಿಳಿಸಿದಾಗ ನಾನೇಕೆ ಈ ಚಿಕಿತ್ಸೆಯನ್ನು ಮೂಲಭೂತವಾಗಿ ಪರಿಚಯಿಸಿ ಕೃತಿ ರಚಿಸಬಾರದೆಂದು ಯೋಚಿಸಿದೆ. ನನ್ನಾಸೆಯನ್ನು ಡಾ|ರಘುಪತಿಯವರಲ್ಲಿ ವ್ಯಕ್ತಪಡಿಸಿದಾಗ ಅವರು ಸಂತೋಷಿಸಿ ಬರವಣಿಗೆಗೆ ಅಗತ್ಯವಾದ ಸಾಹಿತ್ಯ ರಾಶಿಯನ್ನು ಒದಗಿಸಿದರು. 

 ಇದರ ಪ್ರತಿಫಲವಾಗಿ “ನ್ಯೂರೋಥೆರಪಿ” ಕೃತಿ ತಮ್ಮ ಕೈಯಲ್ಲಿದೆ. ನನಗೆ ಲಭ್ಯವಾದ ಹಾಗೂ ಎಟುಕುವಷ್ಟು ವಿಷಯಗಳನ್ನು ನೀಡುವ ಮೂಲಕ ಔಷಧರಹಿತ ಚಿಕಿತ್ಸೆಯಾದ ನÀÆ್ಯರೋಥೆರಪಿಯನ್ನು ಪರಿಚಯಿಸಿದ್ದೇನೆ. ನಾನು ವೈದ್ಯಳಲ್ಲದಿದ್ದರೂ ರಘುಪತಿಯವರ ಸಹಾಯದಿಂದ ಈ ಪುಸ್ತಕ ಬರೆದಿದ್ದೇನೆ. ಇದಕ್ಕೂ ಹೆಚ್ಚಿನ ಮಾಹಿತಿ ಬೇಕೆನಿಸುವವರು ಯಾವುದೇ ಸಮಯದಲ್ಲಾದರೂ ಕೊನೆಯ ಪುಟದಲ್ಲಿ ಹೆಸರಿಸಿರುವ ಡಾಕ್ಟರ್‌ಗಳನ್ನು ಭೇಟಿ ಮಾಡಬಹುದು. 

 ಎಂದಿನAತೆ ನನ್ನ ಗುರುಗಳೂ ಮಾರ್ಗದರ್ಶಕರೂ ಆದ ಡಾ| ಮಳಲಿ ವಸಂತಕುಮಾರ್ ಅವರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಸಹೃದಯ ಓದುಗರು ನನ್ನ ಇನ್ನಿತರ ಕೃತಿಗಳಂತೆ ಈ ಕೃತಿಯನ್ನೂ ಆತ್ಮೀಯವಾಗಿ ಸ್ವೀಕರಿಸುವಿರಾಗಿ ಭರವಸೆ ಇಟ್ಟಿದ್ದೇನೆ. ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು.

 ಸನ್ಮಾನ್ಯ ಡಾII ರಘುಪತಿಯವರು ಈ ಕೃತಿಗೆ ಪ್ರೇರಕರಾಗಿ ಕೃತಿ ಪ್ರಕಟಗÉÆಳ್ಳಲು ಎಲ್ಲ ಹಂತದಲ್ಲಿ ಸಹಕಾರ, ಸಲಹೆ, ಸೂಚನೆಗಳನ್ನು ನೀಡಿ ಪ್ರಕಾಶನಕ್ಕೆ ಪಡಿಸಿದ್ದರು. ಅವರಾಸೆಯಂತೆ ಪುಸ್ತಕ ಮುದ್ರಣ ಕಾಣುವ ಮೊದಲೇ ಅಸುನೀಗಿದರು, ಅವರಿಗೆ ಈ ಕೃತಿ ಕುಸುಮವನ್ನು ಗೌರವ, ಆದರಪೂರ್ವಕ ವಾಗಿ ಅರ್ಪಿಸಿ ಅಭಿನಂದಿಸಿದ್ದೇನೆ. 

 ಈ ಕೃತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಮುನ್ನುಡಿಯ ತಿಲಕವನ್ನಿಟ್ಟ ಪತ್ರಿಕಾವರದಿಗಾರರೂ, ಸಾಗರ ವಾರ್ತಾ ಪತ್ರಿಕೆಯ ಸಂಪಾದಕರೂ ಆದ ಶ್ರೀ ರಾಮಚಂದ್ರಭಟ್ಟರಿಗೆ ಧನ್ಯವಾದಗಳು. ಈ ಕೃತಿಯನ್ನು ಸಕಾಲದಲ್ಲಿ ಡಿಟಿಪಿ ಮಾಡಿ ಪುಸ್ತಕವನ್ನು ಪ್ರಕಾಶಿಸಿದ ಶ್ರೀ ಶಿವರಾಂ ಮತ್ತು ಶ್ರೀ ಕೆ. ಕೇಶವ ಅವರುಗಳಿಗೆ ನನ್ನ ಕೃತಜ್ಞತೆಗಳು. 


-ವಿಜಯಮಾಲಾ ರಂಗನಾಥ್.


评分和评价

5.0
1 条评价

作者简介

ಶ್ರೀಮತಿ ಕಲಾಶ್ರೀ ಡಾ|| ವಿಜಯಮಾಲಾ ರಂಗನಾಥ್ ಅವರ ಪರಿಚಯ

ಆಧುನಿಕ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಕರ್ನಾಟಕ ಕಲಾಶ್ರೀ ಡಾ|| ವಿಜಯಮಾಲಾ ರಂಗನಾಥ್ ಅವರದು ಮುಖ್ಯ ಹೆಸರುಗಳಲ್ಲೊಂದು. ಇವರ ತಂದೆ ನಾಡಿನಲ್ಲಿ ಸ್ಕಾಲರ್‌ಶಿಪ್ ಶಂಕರಪ್ಪ ಎಂದು ಹೆಸರಾದ ನಿವೃತ್ತ ಉಪನ್ಯಾಸಕರೂ ಮತ್ತು ಸಮಾಜ ಸೇವಕರೂ ಆದ ಶಂಕರಪ್ಪ ಮತ್ತು ತಾಯಿ ಗಮಕÀ ವಿದುಷಿ ಬಿ. ವೆಂಕಟಲಕ್ಷಿö್ಮ. ಮೈಸೂರು ವಿಶ್ವವಿದ್ಯಾ ನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನೂ, ಅಣ್ಣಾಮಲೈ ವಿಶ್ವ ವಿದ್ಯಾನಿಲಯದಿಂದ ಎಂ.ಇಡಿ ಪದವಿಯನ್ನು ಪಡೆದು ೧೯೯೬ರಲ್ಲಿ “ಕನ್ನಡದಲ್ಲಿ ಗಮಕ ಕಲೆ ಮತ್ತು ಸಾಹಿತ್ಯ-ಒಂದು ಅಧ್ಯಯನ” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ, ಪಿಎಚ್.ಡಿ ಪದವಿಯನ್ನು ಗಳಿಸಿದ್ದಾರೆ.ಶಾಸ್ತಿçÃಯ ಸಂಗೀತದಲ್ಲಿ ವಿದ್ವತ್‌ವರೆಗೆ ಅಭ್ಯಾಸ ಮಾಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಮಕ ಡಿಪ್ಲೊಮಾ ಮತ್ತು ದಕ್ಷಿಣ ಭಾರತ ಹಿಂದಿ ರಾಷ್ಟçಭಾಷಾ ಪದವಿ ಅರ್ಹತಾಪತ್ರಗಳನ್ನು ಪಡೆದು ಸೀನಿಯರ್ ಹಿಂದಿ ಪ್ರಚಾರಕಿ ಆಗಿದ್ದಾರೆ.ಎಂ.ಎ. ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಕೀರ್ತಿ ಇವರದು.ಹಿಂದಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಪ್ರಭುತ್ವ ಸಾಧಿಸಿದರೂ, ಕನ್ನಡದಲ್ಲಿ ಕೃಷಿ ಮಾಡಿದುದು ವಿಶೇಷ.

ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡ ವಿಜಯಮಾಲಾ ಪ್ರಾರಂಭದಲ್ಲಿ ಮೈಸೂರು ಅರಸು ಬೋರ್ಡಿಂಗ್ ಪ್ರೌಢಶಾಲೆ, ಚನ್ನರಾಯಪಟ್ಟಣದ ನವೋದಯ ಪ್ರೌಢಶಾಲೆ, ಮೈಸೂರಿನ ಸಮೀರಾ ಶಿಕ್ಷಕರ ಪ್ರಶಿಕ್ಷಣ ಕಾಲೇಜು ನಂತರ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಶಿಕ್ಷÀಕಿಯಾಗಿ ನಂತರ ಬೆಂಗಳೂರಿನ ಎಂ.ಎಸ್.ರಾಮಯ್ಯ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಕರ್ನಾಟಕದಲ್ಲಿ ಹೆಸರಾಂತ ಗಮಕ ವಿದುಷಿಯೂ ಆಗಿರುವ ಡಾ|| ವಿಜಯಮಾಲಾ ರಂಗನಾಥ್ ಕನ್ನಡ ಸಾಹಿತ್ಯಕ್ಕೆ ಬಹುಮೌಲಿಕ ಕೊಡುಗೆ ಗಳನ್ನು ನೀಡಿದ್ದಾರೆ. ಕತೆ, ಕವಿತೆ, ಪ್ರಬಂಧ, ಹಾಸ್ಯ, ಜೀವನ ಚರಿತ್ರೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಮೌಲಿಕವಾದ ಕೃತಿಗಳನ್ನು ರಚಿಸಿದ್ದಾರೆ. ಗಮಕ ಕಲೆ ಕುರಿತು ಸಂಶೋಧನೆ ನಡೆಸಿದ ಡಾಕ್ಟರೇಟ್ ಪಡೆದ ಮೊದಲ ಕನ್ನಡತಿ. ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿರುವ ಪ್ರಮುಖ ಕೃತಿಗಳೆಂದರೆ ಚಂದ್ರಮ ಜೊಲ್ಲ ಸುರಿಸ್ಯಾನ ಮತ್ತು ಋತುಗಾನ ಕವನ ಸಂಕಲನಗಳು, ಬೆಳಕಿನೆಡೆಗೆ ಮತ್ತು ಕ್ಷಣಕ್ಷಣದ ಕತೆಗಳು ಕಥಾಸಂಕಲನಗಳು, ಮಾಹಿಮಾನ್ವಿತರು, ವಿ.ಕೃ. ಗೋಕಾಕ್, ಎ.ಎನ್. ಮೂರ್ತಿರಾವ್ ಮತ್ತು ಮೌಲ್ಯವಂತ ಶಂಕರಪ್ಪ ಜೀವನ ಚರಿತ್ರೆಗಳು ಕನ್ನಡದಲ್ಲಿ ಗಮಕ ಕಲೆ ಮತ್ತು ಸಾಹಿತ್ಯ-ಸಂಶೋಧನ ಕೃತಿ, ರಜತಗಿರಿಯಿಂದ ಕನ್ಯಾಕುಮಾರಿಯವರೆಗೆ ಮತ್ತು ವಿಶ್ವವಿಖ್ಯಾತ ಬೆಂಗಳೂರು ಪ್ರವಾಸ ಕಥನ, ಸಾಹಿತ್ಯ ಮತ್ತು ಸಂಸ್ಕೃತಿ ಪ್ರಬಂಧ ಸಂಕಲನ, ನಗೆನವಿಲಜಾಗರ, ನಗೆ ಸೋನೆ, ನಗೆ ನರ್ತನ ಮತ್ತು ನಗೆನವಿರು ಹಾಸ್ಯ ಸಾಹಿತ್ಯ. ಆರೋಗ್ಯದ ಅರಿವು ವೈದ್ಯಸಾಹಿತ್ಯ, ವಿಶ್ವ ವಿಜ್ಞಾನ, ವಿಸ್ಮಯ ವಿಜ್ಞಾನ ಸಾಹಿತ್ಯ, ನುಡಿಗಡಣ ನುಡಿಸಿರಿಮಾಲೆ ಸಂಗ್ರಹ ಇತ್ಯಾದಿ ಕೃತಿಗಳ ಮೂಲಕ ಅನೇಕ ಮುಕ್ತಿಕ ಸಾಹಿತ್ಯ ಕ್ಷೇತ್ರದಲ್ಲ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದಾರೆ.

ಇದುವರೆಗೆ ಸುಮಾರು ೩೪ ಕೃತಿಗಳನ್ನು ಬರೆದಿದ್ದಾರೆ. ಇವರ ಬರವಣಿಗೆ ಕೇವಲ ಸಾಹಿತ್ಯಕ ಮಾತ್ರವಲ್ಲ, ಸಾಂಸ್ಕೃತಿಕ ವಾಗಿಯೂ ಮಹತ್ವದ್ದಾಗಬಲ್ಲದು. ಕ್ಷಣಕ್ಷಣದ ಕತೆಗಳು ಶೀರ್ಷಿಕೆಯ ಕೃತಿ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಮಹತ್ವದ ಕಾಣಿಕೆ. ಮಾನವ ಸಂಬAಧಗಳ ಸೂಕ್ಷö್ಮತೆಯನ್ನು ಧ್ವನಿಪೂರ್ಣವಾಗಿ ಬಿಂಬಿಸುವ ಈ ಕಥೆಗಳಲ್ಲಿ ಅನಗತ್ಯ ವಿಸ್ತಾರಗಳಿಲ್ಲ, ಅವಶ್ಯವಾದ ಚಿತ್ತಾರಗಳಿವೆ. ಮಹಾ ಕಾವ್ಯಗಳಲ್ಲಿ ಹೇಳಬಹುದಾದುದನ್ನು ಹನಿಗವನಗಳಲ್ಲಿ ಹರಳುಗಟ್ಟಿದಂತೆ, ಕಾದಂಬರಿ ಯೊಂದು ಹೇಳುವ ಜೀವನದರ್ಶನ ಈ ಕಿರುಗತೆಗಳಲ್ಲಿ ಕೆನೆಗಟ್ಟಿ ನಿಂತಿವೆ. ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ವಿನೂತನ ಹೆಜ್ಜೆ. ಯುಗದ ಧಾವಂತಕ್ಕೆ ಕಟ್ಟಿದ ಕ್ಷಣದ ಕಥನಗೆಜ್ಜೆ. ಕನ್ನಡ ಕಥಾಲೋಕಕ್ಕೆ ಒಂದು ನೂತನ ಸೇರ್ಪಡೆ. ‘ನಗೆನವಿಲ ಜಾಗರ, ನಗೆ ಸೋನೆ ಮತ್ತು ನಗೆನರ್ತನ ನಗೆನವಿರು. ಹಾಸ್ಯಪ್ರಧಾನ ಕೃತಿಗಳಲ್ಲಿ ಜೀವನದ ವಿವಿಧ ರಂಗಗಳಲ್ಲಿ ಸಹಜವಾಗಿ ಘಟಿಸುವ ಸಂಗತಿಗಳನ್ನಾಧರಿಸಿ ಉನ್ನತವಾದ ನಗೆನುಡಿಗಳನ್ನು ಕ್ಷಣಕ್ಷಣದ ಹಾಸ್ಯಗಳನ್ನಾಗಿ ಸಹೃzಯರಿಗೆ ಒದಗಿಸಿ ಕೊಟ್ಟಿರುವ ಕೀರ್ತಿ ಇವರಿಗಿದೆ. ಹಾಸ್ಯ ಬದುಕಿಗೆ ಹೊಸ ಚೈತನ್ಯ ನೀಡುವ ನಿಜ ಸಂಜೀವಿನಿ ಎಂಬುದು ಸುವ್ಯಕ್ತವಾಗಿದೆ. ಕನ್ನಡ ಸಾಹಿತ್ಯಕ್ಕೆ ಇವುಗಳು ಮಹತ್ವದ ಕೊಡುಗೆಗಳಾಗಿವೆ.

ಡಾ|| ವಿಜಯಮಾಲಾ ಅವರು ಗಮಕಿಯಾಗಿ, ಲೇಖಕಿಯಾಗಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಗಮಕ ಕಲೆ ಕುರಿತು ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ೧೯೯೮ರಿಂದಲೂ ಆಕಾಶವಾಣಿಯ ಗಮಕ ವಿದುಷಿಯಾ ಗಿದ್ದಾರೆ. ಈಗ ಬಸವ ಟಿ.ವಿ.ಯಲ್ಲಿ ವಚನ ಗಾಯಕಿಯಾಗಿದ್ದಾರೆ. ಸಾಹಿತ್ಯ ಮತ್ತು ಗಮಕ ಕ್ಷೇತ್ರಗಳ ಸಮಗ್ರ ಸಾಧನೆಗಾಗಿ ಇವರಿಗೆ ಲಭಿಸಿರುವ ಪ್ರಶಸ್ತಿ ಸನ್ಮಾನಗಳು ಹಲವು. ಅವುಗಳಲ್ಲಿ ಪ್ರಮುಖವಾದುವು ೨೦೧೨ರಲ್ಲಿ ಶ್ರೀಮತಿ ಸವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ ೨೦೧೪ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ೨೦೧೭ರಿಂದ ಬಸವ ಟಿವಿಯ ಕಲಾವಿದ ರಾಗಿದ್ದಾರೆ. ೨೦೧೭ರಲ್ಲಿ ಮೀರಾ ಸಂಗೀತ ನಿಕೇತನದಿಂದ ಗಮಕ ಕಲಾಕೌಸ್ತುಭ ಪ್ರಶಸ್ತಿ, ೨೦೧೮ರಲ್ಲಿ ಶ್ರೀರಾಮಸೇವಾ ಪ್ರತಿಷ್ಠಾನ ಟ್ರಸ್ಟ್ದಿಂದ ಗಮಕ ಕಲಾಮೃತ ಪ್ರಪೂರ್ಣೆ ಪ್ರಶಸ್ತಿ, ೨೦೧೨ರಲ್ಲಿ ಶ್ರೀ ಸರಸ್ವತಿ ಸಂಗೀತ ಸಾಹಿತ್ಯ ಸದನ ಸಮಿತಿಯಿಂದ ಸಂಗೀತ ಸಾಹಿತ್ಯ ಸಮೀಕ್ಷಣ ಸಾಮ್ರಾಜ್ಞಿ, ಅಲ್ಲದೆ ಕರ್ನಾಟಕ ಗಮಕ ಕಲಾಪರಿಷತ್ತು, ಕುಮಾರವ್ಯಾಸ ಮಂಟಪ, ಮಲೆನಾಡು ಗಮಕ ಕಲಾ ಸಂಘ, ಕನ್ನಡ ಸಾಹಿತ್ಯ ಕಲಾಕೂಟ, ಕಾವ್ಯ ರಂಜನೀ ಸಭಾ, ಸೃಷ್ಟಿ ಅನಿವಾಸಿ ಭರತೀಯ ಸಾಂಸ್ಕೃತಿಕ ಸಂಸ್ಥೆ- ಹೀಗೆ ಅನೇಕ ಸಂಘಸAಸ್ಥೆ ಗಳು ಗೌರವಿಸಿವೆ. ಇವರ ಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.

-ರಂಗನಾಥ ಬಿಳಿಗಿ

ನವನೀತ ಪ್ರಕಾಶನ

ಬೆಂಗಳೂರು

ಕರೆ: ೯೮೮೬೨೦೬೪೮೦

为此电子书评分

欢迎向我们提供反馈意见。

如何阅读

智能手机和平板电脑
只要安装 AndroidiPad/iPhone 版的 Google Play 图书应用,不仅应用内容会自动与您的账号同步,还能让您随时随地在线或离线阅览图书。
笔记本电脑和台式机
您可以使用计算机的网络浏览器聆听您在 Google Play 购买的有声读物。
电子阅读器和其他设备
如果要在 Kobo 电子阅读器等电子墨水屏设备上阅读,您需要下载一个文件,并将其传输到相应设备上。若要将文件传输到受支持的电子阅读器上,请按帮助中心内的详细说明操作。