APASWARA

· KK PRINTERS &PUBLISHERS
2.0
2 રિવ્યૂ
ઇ-પુસ્તક
48
પેજ
રેટિંગ અને રિવ્યૂ ચકાસેલા નથી વધુ જાણો

આ ઇ-પુસ્તક વિશે

‘ಹಂಸಗೀತೆ’ ತ. ರಾ. ಸು. ಅವರ ಅಮೋಘ ಕಾದಂಬರಿ. ಸಂಗೀತವನ್ನು ಕಲಿಯುವಾಸೆಯಿಂದ ಗುರುವನ್ನರಸಿ ಹುಡುಕಾಟ ನಡೆಸಿ, ನಿಷ್ಠೆಯಿಂದ ಗುರುಸೇವೆ ಮಾಡಿ, ಶ್ರದ್ಧೆಯಿಂದ ಸಂಗೀತವನ್ನು ಕಲಿತು, ಸಂಗೀತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನ್ ಸಂಗೀತಗಾರ, ದೇವಿಯ ಉಪಾಸಕ, ಸ್ವಾಭಿಮಾನಿಯೂ ಆದ ಭೈರವಿ ವೆಂಕಟಸುಬ್ಬಯ್ಯನ ಪಾತ್ರವು ತ. ರಾ. ಸು. ಅವರ ಕಲ್ಪನೆಯ ಕೂಸು. ಆ ಪಾತ್ರದ ಕಾಲವನ್ನು ಚಿತ್ರದುರ್ಗದ ವೀರ ಮದಕರಿ ನಾಯಕನ ಕಾಲವೆಂದೇ ಸೃಷ್ಟಿಸಿದ್ದರೂ ಕಾದಂಬರಿಯ ಓಟವನ್ನು ಚಿತ್ರದುರ್ಗಕ್ಕೇ ಮೀಸಲಿಡದೆ, ಮದಕರಿನಾಯಕನ ಕಾಲಕ್ಕೇ ಸೀಮಿತಗೊಳಿಸದೆ ವರ್ತಮಾನದ ಸನ್ನಿವೇಶಗಳಲ್ಲಿ ಗತಕಾಲದ ನೆನಪುಗಳ ಮಿಂಚುಬಳ್ಳಿಗಳನ್ನು ಸಿಟಿಲೊಡೆಸಿ ಕಾದಂಬರಿಯನ್ನು ಮನೆಸೂರೆಗೊಳ್ಳುವಂತೆ ರೂಪಿಸಿರುವ ತ.ರಾ.ಸು. ಅವರಿಗೆ ಅವರೇ ಸಾಟಿ.

ಆ ಸುಂದರ ಕಾದಂಬರಿಯನ್ನು ಓದುತ್ತಿದ್ದ ಹಾಗೆಯೇ ಸುಮಾರು ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ಕಾಲಕ್ಕೆ ಜಾರಿದ ಮನಸ್ಸು ಚಿತ್ರದುರ್ಗದ ಹೆಗ್ಗಲ್ಲಿನ ಬೆಟ್ಟ, ಸುತ್ತುವರಿದ ಕಲ್ಲಿನ ಕೋಟೆ, ತಣ್ಣನೆಯ ಗಾಳಿ, ಆಗತಾನೆ ಕವಿದ ಕತ್ತಲಿನ ಕಪ್ಪು ಹೊದಿಕೆಯ ಕೆಳಗೆ ತೆಳ್ಳನೆಯ ಬೆಳಕು ಚೆಲ್ಲುತ್ತಿದ್ದ ಪಂಜುಗಳು, ಆ ಪ್ರಶಾಂತ ವಾತಾವರಣದಲ್ಲಿ ಗಾಳಿಯಲ್ಲಿ ತೇಲಿಬರುವ ಮೈಮರೆಸುವ, ಮನಸ್ಸನ್ನು ಸೂರೆಗೊಳ್ಳುವ ಸುಮಧುರವಾದ ಸಂಗೀತವನ್ನು ಕೇಳುವ ಅಪೂರ್ವ ಅನುಭವಕ್ಕೆ ತೆರೆದುಕೊಂಡಿತ್ತು.

ಅAದಿನಿAದ ಮಹಾನ್ ಸಂಗೀತಗಾರ ವೆಂಕಟಸುಬ್ಬಯ್ಯ, ಭೈರವಿ ರಾಗ, ಆತನು ಅನುಭವಿಸಿದ ಕಷ್ಟ, ಸುಖ, ಪ್ರೀತಿ, ಪ್ರೇಮ, ನೋವು ನಲಿವುಗಳ ಗುಂಗು ಮನಸ್ಸನ್ನಾವರಿಸಿ ಮಾಗಿ ಅದರ ಒಂದು ತುಣುಕನ್ನು ಆಯ್ದು ಕಿರುಪ್ರಹಸನವನ್ನಾಗಿಸುವ ಕನಸು ಮೂಡಿತ್ತು. ಆ ಕನಸಿನ ಸಾಕಾರವೇ ನನ್ನ ಈ ‘ಅಪಸ್ವರ’.

ನಾಟಕವನ್ನು ಅಂದವಾಗಿ ಮುದ್ರಿಸಿ ಪ್ರಕಟಿಸಿದ ಮೆ|| ಕೆ. ಕೆ. ಪ್ರಿಂರ‍್ಸ್ ಅಂಡ್ ಪಬ್ಲಿರ‍್ಸ್ ಸಂಸ್ಥೆಗೆ ನಾನು ಆಭಾರಿ. ಪುಸ್ತಕಕ್ಕೆ ಸುಂದರ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ನಾರಾಯಣ ಮೂರ್ತಿ ಅವರಿಗೆ ಧನ್ಯವಾದಗಳು.

ಕೃತಿಯ ಬಗ್ಗೆ ಸಹೃದಯಿ ಓದುಗರ ಮತ್ತು ಇದನ್ನು ರಂಗಕ್ಕೆ ಅಳವಡಿಸಿಕೊಳ್ಳುವ ಎಲ್ಲ ಸುಮನಸುಗಳ ಅನ್ನಿಸಿಕೆಗಳ ನಿರೀಕ್ಷೆಯಲ್ಲಿರುತ್ತೇನೆ.

- ವಿ. ವಿ. ಗೋಪಾಲ್

೯೪೮೦೩೧೭೮೦೩

રેટિંગ અને રિવ્યૂ

2.0
2 રિવ્યૂ

લેખક વિશે

આ ઇ-પુસ્તકને રેટિંગ આપો

તમે શું વિચારો છો અમને જણાવો.

માહિતી વાંચવી

સ્માર્ટફોન અને ટૅબ્લેટ
Android અને iPad/iPhone માટે Google Play Books ઍપ ઇન્સ્ટૉલ કરો. તે તમારા એકાઉન્ટ સાથે ઑટોમૅટિક રીતે સિંક થાય છે અને તમને જ્યાં પણ હો ત્યાં તમને ઑનલાઇન અથવા ઑફલાઇન વાંચવાની મંજૂરી આપે છે.
લૅપટૉપ અને કમ્પ્યુટર
Google Play પર ખરીદેલ ઑડિઓબુકને તમે તમારા કમ્પ્યુટરના વેબ બ્રાઉઝરનો ઉપયોગ કરીને સાંભળી શકો છો.
eReaders અને અન્ય ડિવાઇસ
Kobo ઇ-રીડર જેવા ઇ-ઇંક ડિવાઇસ પર વાંચવા માટે, તમારે ફાઇલને ડાઉનલોડ કરીને તમારા ડિવાઇસ પર ટ્રાન્સફર કરવાની જરૂર પડશે. સપોર્ટેડ ઇ-રીડર પર ફાઇલો ટ્રાન્સ્ફર કરવા માટે સહાયતા કેન્દ્રની વિગતવાર સૂચનાઓ અનુસરો.