Karunadu Bhakthi Vybhava

· KK PRINTERS &PUBLISHERS
電子書
248
頁數
評分和評論未經驗證 瞭解詳情

關於這本電子書

ಅಸಾಧಾರಣ ಸಮರ್ಥಶಾಲಿಯೂ, ಅಸೀಮರೂಪಿಯೂ, ಅಗೋಚರ ಚತುರನೂ, ನಿರಾಕಾರಿಯೂ ಆಗಿರುವ ಆ ದೇವರೇ ಇಡೀ ಈ ಜಗತ್ತಿನ ಚರಾ-ಚರ ಜೀವಿಗಳ ಮತ್ತು ಅಣುರೇಣುಕಣಗಳ ಚಾಲನೆ ಹಾಗೂ ನಿರ್ವಹಣೆಗೆ ಕಾರಣಕರ್ತನಾಗಿದ್ದಾನೆ. ಅಂತಹ ದೇವರು ಧರ್ಮಕರ್ತನೂ ಆಗಿದ್ದಾನೆ. ಆದ್ದರಿಂದಲೇ ದೇವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳು, ಆಚರಣೆಗಳು ಹಾಗೂ ಉತ್ಸವಗಳೂ, ಹಬ್ಬ-ಹರಿದಿನಗಳೂ ಜರುಗುತ್ತವೆ. ಮಾನವನನ್ನು ಒಳಗೊಂಡAತೆ ವಿಶ್ವದ ಪ್ರತಿಯೊಂದು ಜೀವಿಗಳೂ ದೇವರ ಅಣತಿಯೆಂತೆ ತಮ್ಮ ಬದುಕನ್ನು ನಿರ್ವಹಿಸುತ್ತವೆ. ಇಷ್ಟೇ ಅಲ್ಲದೆ ಸಮಸ್ತ ಪ್ರಾಕೃತಿಕ ವ್ಯವಸ್ಥೆಯಲ್ಲಿ ಆ ಭಗವಂತನ ಇಚ್ಛೆಯಂತೆಯೇ ನೂರೆಂಟು ರೂಪಾಂತರಗಳು ಆಗುತ್ತಿರುತ್ತವೆ. ವಿಶೇಷವಾಗಿ ಮಾನವರು ದೇವರ ಅಸ್ತಿತ್ವ ಮತ್ತು ಅವನಲ್ಲಿರುವ ಅದ್ಭುತವಾದ ಶಕ್ತಿಸಾಮರ್ಥ್ಯಗಳನ್ನು ಅರಿತು ಅವನ ಅಡಿದಾವರೆಗಳಿಗೆ ಎರಗುತ್ತಾ ಭವಿಷ್ಯದ ಬಾಳಿನ ಒಳಿತಿಗಾಗಿ ಆಶೀರ್ವಾದವನ್ನು ಬೇಡುತ್ತಿರುತ್ತಾನೆ. ಅದಕ್ಕಾಗಿ ಭಕ್ತಿ-ಭಾವದಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ನಿಸರ್ಗದಲ್ಲಿ ಆಗುವ ಯಾವುದೇ ಮಾರ್ಪಾಟುಗಳಿಗಾಗಲೇ ತನ್ಮೂಲಕ ತನ್ನ ಬದುಕಿನಲ್ಲಾಗುವ ಯಾವುದೇ ವಿಸ್ಮಯಕಾರಕ ಬದಲಾವಣೆಗಳಿಗಾಗಲೀ ದೈವಲೀಲೆಯೇ ಕಾರಣ ಎಂದು ಮಾನವ ಭಾವಿಸಿಕೊಳ್ಳುತ್ತಾನೆ.

關於作者

‘ಕರುನಾಡ ಭಕ್ತಿ ವೈಭವ’ ಎಂಬ ಸೊಗಸಾದ ಕೃತಿಯನ್ನು ಬರೆದಿರುವ ನನ್ನ ಆತ್ಮೀಯ ಮಿತ್ರರಾದ ಶ್ರೀ ಬಿ.ಸಿ. ಶಿವಪ್ಪನವರು ಗ್ರಾಮೀಣ ಪ್ರದೇಶದವರಾದರೂ ಅದ್ವಿತೀಯ ಪ್ರತಿಭೆಯುಳ್ಳವರು. ಇಂದು ಅವರು ಉಪನ್ಯಾಸಕರಾಗಿದ್ದು, ವೃತ್ತಿಯಲ್ಲಿದ್ದು ಕೊಂಡು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಅತ್ಯಂತ ಕುತೂಹಲಕಾರಿ ವಿಚಾರಗಳನ್ನೊಳಗೊಂಡ ಅನೇಕ ಪುಸ್ತಕಗಳನ್ನು ಬರೆದಿರುವುದು ನನಗೆ ತುಂಬಾ ಸಂತಸವನ್ನು ತರುವ ಸಂಗತಿಯಾಗಿದೆ.

ಇನ್ನೊAದÀÄ ವಿಶೇಷವಾದ ಸಂಗತಿಯೆAದರೆ ಈ ನನ್ನ ಗೆಳೆಯರು ಕಾಲೇಜು ದಿನಗಳಲ್ಲಿ ಬಿ.ಎ. ತರಗತಿಗಳಲ್ಲಿ ನನಗೆ ಸಹಪಾಠಿಯಾಗಿದ್ದವರು. ಕಾಲೇಜಿನಲ್ಲಿ ಓದುವಾಗಲೇ ಉಪನ್ಯಾಸಕರ ಸಲಹೆಯ ಮೇರೆಗೆ ಹಲವಾರು ಬಾರಿ ಇತಿಹಾಸ ವಿಷಯಕ್ಕೆ ಸಂಬAಧಿಸಿದ ವಿಚಾರಗಳ ಮೇಲೆ ತರಗತಿಗಳಲ್ಲಿ ಸೆಮಿನಾರ್‌ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ಅಂದರೆ ಭೋದನೆಯಲ್ಲಿ ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದರಂತೆ ಈಗ ಅವರು ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಮಹದಾನಂದದ ವಿಷಯವಾಗಿದೆ.

ಓದುವ ದಿನಗಳಿಂದಲೇ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಈ ನನ್ನ ಗೆಳೆಯರು ಅಂದಿನಿAದಲೇ ಬೇರೆ-ಬೇರೆ ಪತ್ರಿಕೆಗಳಿಗೆ ತಮ್ಮ ಬರಹಗಳನ್ನು ಕಳುಹಿಸಿ ಸಂಪಾದಕರಿAದ ಮೆಚ್ಚುಗೆ ಪಡೆಯುತ್ತಿದ್ದರು. ಹಾಗೇಯೇ ಅವರ ಹಲವಾರು ವೈಚಾರಿಕ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ತಿಳಿಸಲು ನನಗೆ ಸಂತಸವಾಗುತ್ತದೆ.

ಈಗ ಇವರು ಬರೆದಿರುವ ‘ಕರುನಾಡ ಭಕ್ತಿ ವೈಭವ’ ಎಂಬ ಕೃತಿಯು ಹೆಸರೇ ಸೂಚಿಸುವಂತೆ ಕರ್ನಾಟಕದ ನಾನಾ ಕಡೆಗಳಲ್ಲಿರುವ ಅನೇಕ ದೇವಾಲಯ ಗಳ ಬಗ್ಗೆ ನೂರಾರು ಮಾಹಿತಿಗಳನ್ನು ಸಂಗ್ರಹಿಸಿ ಆಯಾ ದೇಗುಲಗಳ ಸ್ಥಳಪುರಾಣ, ಸ್ಥಳಮಹಾತ್ಮೆ, ಐತಿಹಾಸಿಕ ಪ್ರಾಮುಖ್ಯತೆ ದೇವಾಲಯಗಳಲ್ಲಿ ನಡೆಯುವ ಪೂಜೆ-ಪುನÀಸ್ಕಾರಗಳು ಹಾಗೂ ಜಾತ್ರೆ-ಉತ್ಸವಗಳಬಗ್ಗೆಯೂ ಮಾರ್ಮಿಕವಾಗಿ ಬರೆದಿದ್ದಾರೆ. ಆದ್ದರಿಂದ ಈ ಪುಸಕ್ತವು ಓದುಗರ ಆಕರ್ಷಣೆಗೆ ಕಾರಣವಾಗುತ್ತದೆ ಎಂಬುದರಲ್ಲಿ ಲವಲೇಶವೂ ಅನುಮಾನವಿಲ್ಲ.

ಹೀಗೆಯೇ ಇನ್ನು ಹಲವಾರು ಗ್ರಂಥಗಳು ಇವರಿಂದ ರಚನೆಯಾಲೆಂದು ಹಾರೈಸುವುದರ ಜೊತೆಗೆ ಅವರ ಸಮಗ್ರ ಕುಟುಂಬಕ್ಕೆ ಒಳ್ಳೆಯದಾಗಲೆಂದು ಆಶಿಸುತ್ತೇನೆ.

ಇತಿ ನಿಮ್ಮ ಗೆಳೆಯ, 

ಸತ್ಯದೇವ, 

ಇತಿಹಾಸ ಉಪನ್ಯಾಸಕರು,

ಸಾಗರ-ಶಿವಮೊಗ್ಗ ಜಿಲ್ಲೆ.

為這本電子書評分

請分享你的寶貴意見。

閱讀資訊

智能手機和平板電腦
請安裝 Android 版iPad/iPhone 版「Google Play 圖書」應用程式。這個應用程式會自動與你的帳戶保持同步,讓你隨時隨地上網或離線閱讀。
手提電腦和電腦
你可以使用電腦的網絡瀏覽器聆聽在 Google Play 上購買的有聲書。
電子書閱讀器及其他裝置
如要在 Kobo 等電子墨水裝置上閱覽書籍,你需要下載檔案並傳輸到你的裝置。請按照說明中心的詳細指示,將檔案傳輸到支援的電子書閱讀器。