¸ಶ್ರೀ ಬಿ.ಸಿ.ಶಿವಪ್ಪನವರು, ನಾನು ಸುಮಾರು ಹದಿನೇಳು ವರ್ಷಗಳು ಕರ್ತವ್ಯ ನಿರ್ವಹಿಸಿದ ಪುಟ್ಟ ಗ್ರಾಮ, ಪಕ್ಕದ ಊರಿನವರು. ಅವರ ನಮ್ಮ ಒಡನಾಟ ಸುಮಾರು ಮುವತ್ತು ವರ್ಷಗಳು ಅದಕ್ಕೂ ಮೊದಲು ಶಾಲಾ ದಿನಗಳು ಕೂಡ ಒಂದೇ ಪ್ರೆöÊಮರಿ, ಒಂದೇ ಪ್ರೌಢ ಶಾಲೆಯಲ್ಲಿ ಮುಗಿಸಿದೆವು. ಅವರು ಆರನೇ ತರಗತಿ ಓದುವಾಗ ನಾವು ಐದನೇ ತರಗತಿಗೆ ಸೇರಿದೆವು. ಶಾಲಾ ದಿನಗಳಲ್ಲೂ ಯಾರ ಜೊತೆಗೂ ಹೆಚ್ಚು ಒಡನಾಟವಿಲ್ಲದ ಸೌಮ್ಯ ಸ್ವಭಾದವರು. ಶಿವಪ್ಪರವರು ಅತ್ಯಂತ ಕಡು ಬಡತನದ ರೈತರ ಕುಟುಂಬದಲ್ಲಿ ಜನಿಸಿದವರು. ತಂದೆ-ತಾಯಿ ಬಡತನದಲ್ಲಿಯೂ ನಾಲ್ಕ ಗಂಡು ಮಕ್ಕಳು ಒಂದು ಹೆಣ್ಣುಮಗು, ಎಲ್ಲರಿಗೂ ಶಿಕ್ಷಣ ಕೊಡಿಸಿದರು. ಆದರೆ ಶಿವಪ್ಪ ಅತಂಹ ಕಡುಬಡತನದಲ್ಲಿ ಕಷ್ಟಪಟ್ಟು ಓದಿ ಮುಂದೆ ಬಂದವರು.
ಮುAದೆ ಪಿ.ಯು.ಸಿ. ಮತ್ತು ಬಿ.ಎ. ಪದವಿ ಪಡೆದು ನಂತರ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಉದ್ಯೋಗ ಸಿಗದಿದ್ದಾಗ ದೃತಿಗೆಡದೆ ಕಷ್ಟದಲ್ಲಿಯೇ ದೂರ ದೂರಿನ ಒಂದು ಕಾಲೇಜಿಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇರಿಕೊಂಡು ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೇವೆ ಸಲ್ಲಿಸುವಲ್ಲಿಯೂ ಕಷ್ಟ. ಮನೆಯಲ್ಲಿಯೂ ಕಷ್ಟದ ಮೇಲೊಂದು ಕಷ್ಟ. ಒಂದು ಸಮಯದಲ್ಲಿ ಅವರ ಪ್ರೀತಿಯ ತಮ್ಮನ ಮಗ ಮುದ್ದು ಪುಟಾಣಿ ಮರಣ. ಅದಾದ ಆರು ತಿಂಗಳಲ್ಲಿ ಒಬ್ಬ ತಮ್ಮನ ಮರಣ. ಹೀಗೆ ಒಂದರ ಮೇಲ್ಲೊಂದÀÄ ಕಷ್ಟಗಳು. ಈ ಕಷ್ಟಗಳನ್ನು ಮರೆಯಲು ಅವರಿಗೆ ತೋಚಿದ ದಾರಿ ಎಂದರೆ ಬರೆಯುವ ಹವ್ಯಾಸ. ಬರೆಯುವ ಹವ್ಯಾಸದಿಂದ ಅವರ ಕಷ್ಟಗಳನ್ನು ಮರೆಯುತ್ತಾ ಉತ್ತಮ ನಾಟಕಗಳು ಕಾದಂಬರಿ, ಕವನ ಸಂಕಲನಗಳು ಮೂಡಿ ಬರಲು ಕಾರಣವಾಯಿತು.
ಸರಳ ಸಜ್ಜನಿಕೆಯ ವ್ಯಕ್ತಿ ಎಂಬುದಕ್ಕೆ ಅವರು ಕೆಲಸ ಮಾಡಿದ ಕಾಲೇಜಿನ ಶಿಷ್ಯರು ಆಡಿದ ಮಾತುಗಳು ನೆನೆಪಿಗೆ ಬರುತ್ತದೆ. ಅವರು ಬಳಸುವ ಯಾವ ವಸ್ತು ಹೊಸತಲ್ಲ ಎಲ್ಲಾ ವಸ್ತುಗಳು ಹಳೆಯವೇ ಇರುವ ಹಳೆಯ ವಸ್ತುಗಳನ್ನು ಇಟ್ಟುಕೊಳ್ಳುವ ರೀತಿ ನೋಡಿದರೆ ಅದಕ್ಕೊಂದು ಉದಾಹರಣೆ ಎಂದರೆ ಅವರು ಧರಿಸುವ ಎಲ್ಲಾ ಬಟ್ಟೆಗಳು ತುಂಬಾ ಹಳೆಯವು. ಅವುಗಳನ್ನು ತೊಳೆದು ಐರನ್ ಮಾಡಿ ಸಣ್ಣ ದೇಹಕ್ಕೆ ತೊಟ್ಟು ಕಾಲೇಜಿಗೆ ಬಂದರೆ ಅವರನ್ನೇ ನೋಡಬೇಕು. ಪಾಠಮಾಡಲು ಕಾಲೇಜು ಕೊಠಡಿಯೊಳಗೆ ಬಂದರೆ ಅವರ ಕೈಯಲ್ಲಿ ಯಾವುದೇ ಚೀಟಿಗಳು ಇರುತ್ತಿರಲಿಲ್ಲ. ಅವರಲ್ಲಿರುವ ಜ್ಞಾನ ಭಂಡಾರ ಎಷ್ಟು ಎಂದರೆ ಎರಡು ಗಂಟೆ ಉಪನ್ಯಾಸ ಮಾಡಿದರೂ ಖಾಲಿ ಆಗುತ್ತಿರಲಿಲ್ಲ ಎಂದು ಅವರ ಶಿಷ್ಯರು ಹೇಳುತ್ತಾರೆ.
ಶ್ರೀ ಶಿವಪ್ಪನವರು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬನದಕೊಪ್ಪ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇತಂಹ ಸುಂದರ ಪರಿಸರದಲ್ಲಿ ಬೆಳೆದ ಇವರು ತಮಗೆ ತೊಚ್ಚಿದ್ದನ್ನು ಅತ್ಯಂತ ಸುಂದರವಾಗಿ ಬರೆಯುವ ಇವರು, ಮೊದಲು ಬರೆದಿದ್ದು ನಾಟಕ. ಆ ನಾಟಕ ಮುದ್ರಿತವಾಗುವ ಮೊದಲು ತಮ್ಮ ಹುಟ್ಟೂರಿನ ಅಂದಿನ ಯುವಕರು ಆಡಿ ತೋರಿಸಿದರು. ಇದರಿಂದ ಪ್ರೇರೇಪಿತರಾದ ಶಿವಪ್ಪನವರು ಮುಂದೆ ಅನೇಕ ನಾಟಕಗಳು, ಕಾದಂಬರಿ, ಪ್ರಬಂಧ, ಕವನಸಂಕಲನ, ಮತ್ತು ಕಿರುನಾಟಕ ಬರೆದು ಜನ ಪ್ರೀಯರಾದರು. ಸುಂದರ ಪರಿಸರದಲಿದ್ದ ಇವರ ನೀರಿನ ಋಣ ಉದ್ಯೋಗ ಆರಸಿ ಕಡು ಬಿಸಿಲಿನ ನಾಡಿನ ಕಡೆಗೆ ಕರೆದೊಯಿತ್ತು. ಅವರ ಒಡನಾಟ ಕಡಿಮೆಯಾದರೂ ಅವರ ನಮ್ಮ ಪ್ರೀತಿ ವಿಶ್ವಾಸ ಇನ್ನೂ ಹೆಚ್ಚಾಯಿತು.
ಬರಹ ಜ್ಞಾನ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ, ಓದಿನಲ್ಲಿ ಪಕ್ವತೆ, ಕರ್ತವ್ಯನಿಷ್ಠೆ, ಸರಳ ವ್ಯಕ್ತಿವ್ವ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾದ ಇವರು ಶಿಕ್ಷಣ ರಂಗಕ್ಕೂ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ದೊರೆಯುವ ಸೇವೆ ಎಂದು ಹೇಳಬಹುದು. ಶ್ರೀಯುತರು ಸಾಹಿತ್ಯ ಕ್ಷೇತ್ರದ ಸಾಹಿತ್ಯ ರತ್ನವಾಗಲು ಅವರು ಬರೆದ ‘ಗೀಜಗನ ಗೂಡು’ ಎಂಬ ಕವನ ಸಂಕಲನ ಓದುತ್ತ ಸಾಗಿದರೆ, ಯುವಶಕ್ತಿ, ವಿದ್ಯಾದೇಗುಲ, ದೀಪ, ನೆರಳು, ಮಲೆನಾಡ ಸಿರಿ, ಇನ್ನು ಅನೇಕ ಕವನಗಳು ಸರಳವಾಗಿ ಸುಂದರವಾಗಿ ಮೂಡಿಬಂದಿವೆ.
ಇವರು ಈಗ ಪ್ರಕಟಿಸುತ್ತಿರುವ ಕಾದಂಬರಿ ‘ಕಾಣದ ಕೈಗಳು’ ಸಮೃದ್ಧ ಪ್ರ‍್ರಕೃತಿಯ ಮಡಿಲಲ್ಲಿ ಪರಿಸರ ಸವಿಯನ್ನು ಸವಿದ ಇವರು ಕರ್ನಾಟಕದಲ್ಲಿ ಅತ್ಯಂತ ಸಮೃದ್ಧ ಕಾಡನ್ನು ಹೊಂದಿರುವ ಈ ನಾಡಿನಲ್ಲಿ ಹೆಚ್ಚು ಮಳೆಬೀಳುವ ಅತೀ ಹೆಚ್ಚು ಕಾಡಿನ ಸಂಪನ್ಮೂಲ ಹೊಂದಿರುವ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣಿಕ ಸ್ಥಳವಾದ ಸೂರ್ಯಸ್ತಮಾನಕ್ಕೆ ಹೆಸರಾದ ‘ಆಗುಂಬೆ’ ಈ ಪ್ರದೇಶ ಸುತ್ತ ಮುತ್ತಲು ಇರುವ ಕಾಡಿನ ಅಮೋಘ, ಸಂಪನ್ಮೂಲವನ್ನು ಕಬಳಿಸುವ ಕಾಡುಗಳ್ಳರನ್ನು ಮಟ್ಟ ಹಾಕಲು ಹೋರಾಡುವ ಅಧಿಕಾರಿಗಳು ಒಂದು ಕಡೆ ಕಾರ್ಯಪ್ರವೃತ್ತರಾದರೆ. ಕಾಡುಗಳ್ಳರಿಗೆ ಬೆಂಗಾವಲಾಗಿ ಅವರೆಲ್ಲ ಚಟುವಟಿಕೆಗಳಿಗೆ ಕುಮ್ಮಕೂ ನೀಡುವರು ಯಾರು ಎಂದು ಪತ್ತೆ ಹಚ್ಚಲು ಅಧಿಕಾರಿಗಳ ಹೆಣಗಾಟ, ಕೊನೆಗೂ ಅದಕ್ಕೆ ಕಾರಣರಾದವರು ಯಾರೂ ಅಲ್ಲ, ಅವರು ಅಧಿಕಾರಿಗಳ ಪತ್ನಿಯರು ಎಂಬುದು ಬೆಳಕಿಗೆ ತರುವಲ್ಲಿ ಅಧಿಕಾರಿಗಳು ಯಶಸ್ಸನ್ನು ಪಡೆಯುತ್ತಾರೆ ಅಲ್ಲಿರುವ ಕಾಡಿನ ಸಂಪನ್ಮೂಲ ವನ್ನು ಕಾಪಾಡುವಲ್ಲಿ ಸಂಪೂರ್ಣ ಚಿತ್ರಣವನ್ನು ಅತ್ಯಂತ ಸುಂದರವಾಗಿ ಬರೆದು ಪ್ರಕಟಿಸಲು ಸಿದ್ಧರಾಗಿರುವ ಶ್ರೀ ಶಿವಪ್ಪ ಅವರಿಗೆ ಸಾಹಿತ್ಯ ಆಸಕ್ತರಾಗಿ, ಓದುಗರಾಗಿ, ಪ್ರೀತಿಯ ಸ್ನೇಹಿತರಾಗಿ ಕಾದಂಬರಿ ‘ಕಾಣದ ಕೈಗಳು’ ಓದಿದ ಓದುಗರ ಮನದಾಳದಲ್ಲಿ ಹಚ್ಚಹಸಿರಾಗಿ ಉಳಿಯಲಿ ಹಾಗೇ ಇನ್ನೂ ಹೆಚ್ಚು ಹೆಚ್ಚು ಕಾದಂಬರಿ, ನಾಟಕ, ಪ್ರಬಂಧ, ಕವನ ಸಂಕಲನಗಳು, ಸಣ್ಣ ಕಥೆಗಳು, ಮಕ್ಕಳ ಕಥೆಗಳು, ಹಾಗೂ ಇತಿಹಾಸದ ಅನೇಕ ಸತ್ಯ ಘಟನೆಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ. ತಮ್ಮ ಕಾದಂಬರಿಗೆ ಮುನ್ನುಡಿ ಬರೆಯಲು ಅನುವು ಮಾಡಿಕೊಟ್ಟ ಶ್ರೀ ಶಿವಪ್ಪರವರಿಗೆ ಕಿರಿಯರ ಆಶಯ ಹಿರಿಯರ ಹಾರೈಕೆಗಳನ್ನು ತಿಳಿಸುತ್ತಾ ನನ್ನ ಆಬಿನಂದನೆಗಳು.