‘ಕರುನಾಡ ಭಕ್ತಿ ವೈಭವ’ ಎಂಬ ಸೊಗಸಾದ ಕೃತಿಯನ್ನು ಬರೆದಿರುವ ನನ್ನ ಆತ್ಮೀಯ ಮಿತ್ರರಾದ ಶ್ರೀ ಬಿ.ಸಿ. ಶಿವಪ್ಪನವರು ಗ್ರಾಮೀಣ ಪ್ರದೇಶದವರಾದರೂ ಅದ್ವಿತೀಯ ಪ್ರತಿಭೆಯುಳ್ಳವರು. ಇಂದು ಅವರು ಉಪನ್ಯಾಸಕರಾಗಿದ್ದು, ವೃತ್ತಿಯಲ್ಲಿದ್ದು ಕೊಂಡು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಅತ್ಯಂತ ಕುತೂಹಲಕಾರಿ ವಿಚಾರಗಳನ್ನೊಳಗೊಂಡ ಅನೇಕ ಪುಸ್ತಕಗಳನ್ನು ಬರೆದಿರುವುದು ನನಗೆ ತುಂಬಾ ಸಂತಸವನ್ನು ತರುವ ಸಂಗತಿಯಾಗಿದೆ.
ಇನ್ನೊAದÀÄ ವಿಶೇಷವಾದ ಸಂಗತಿಯೆAದರೆ ಈ ನನ್ನ ಗೆಳೆಯರು ಕಾಲೇಜು ದಿನಗಳಲ್ಲಿ ಬಿ.ಎ. ತರಗತಿಗಳಲ್ಲಿ ನನಗೆ ಸಹಪಾಠಿಯಾಗಿದ್ದವರು. ಕಾಲೇಜಿನಲ್ಲಿ ಓದುವಾಗಲೇ ಉಪನ್ಯಾಸಕರ ಸಲಹೆಯ ಮೇರೆಗೆ ಹಲವಾರು ಬಾರಿ ಇತಿಹಾಸ ವಿಷಯಕ್ಕೆ ಸಂಬAಧಿಸಿದ ವಿಚಾರಗಳ ಮೇಲೆ ತರಗತಿಗಳಲ್ಲಿ ಸೆಮಿನಾರ್‌ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದರು. ಅಂದರೆ ಭೋದನೆಯಲ್ಲಿ ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದರಂತೆ ಈಗ ಅವರು ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಮಹದಾನಂದದ ವಿಷಯವಾಗಿದೆ.
ಓದುವ ದಿನಗಳಿಂದಲೇ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಈ ನನ್ನ ಗೆಳೆಯರು ಅಂದಿನಿAದಲೇ ಬೇರೆ-ಬೇರೆ ಪತ್ರಿಕೆಗಳಿಗೆ ತಮ್ಮ ಬರಹಗಳನ್ನು ಕಳುಹಿಸಿ ಸಂಪಾದಕರಿAದ ಮೆಚ್ಚುಗೆ ಪಡೆಯುತ್ತಿದ್ದರು. ಹಾಗೇಯೇ ಅವರ ಹಲವಾರು ವೈಚಾರಿಕ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ತಿಳಿಸಲು ನನಗೆ ಸಂತಸವಾಗುತ್ತದೆ.
ಈಗ ಇವರು ಬರೆದಿರುವ ‘ಕರುನಾಡ ಭಕ್ತಿ ವೈಭವ’ ಎಂಬ ಕೃತಿಯು ಹೆಸರೇ ಸೂಚಿಸುವಂತೆ ಕರ್ನಾಟಕದ ನಾನಾ ಕಡೆಗಳಲ್ಲಿರುವ ಅನೇಕ ದೇವಾಲಯ ಗಳ ಬಗ್ಗೆ ನೂರಾರು ಮಾಹಿತಿಗಳನ್ನು ಸಂಗ್ರಹಿಸಿ ಆಯಾ ದೇಗುಲಗಳ ಸ್ಥಳಪುರಾಣ, ಸ್ಥಳಮಹಾತ್ಮೆ, ಐತಿಹಾಸಿಕ ಪ್ರಾಮುಖ್ಯತೆ ದೇವಾಲಯಗಳಲ್ಲಿ ನಡೆಯುವ ಪೂಜೆ-ಪುನÀಸ್ಕಾರಗಳು ಹಾಗೂ ಜಾತ್ರೆ-ಉತ್ಸವಗಳಬಗ್ಗೆಯೂ ಮಾರ್ಮಿಕವಾಗಿ ಬರೆದಿದ್ದಾರೆ. ಆದ್ದರಿಂದ ಈ ಪುಸಕ್ತವು ಓದುಗರ ಆಕರ್ಷಣೆಗೆ ಕಾರಣವಾಗುತ್ತದೆ ಎಂಬುದರಲ್ಲಿ ಲವಲೇಶವೂ ಅನುಮಾನವಿಲ್ಲ.
ಹೀಗೆಯೇ ಇನ್ನು ಹಲವಾರು ಗ್ರಂಥಗಳು ಇವರಿಂದ ರಚನೆಯಾಲೆಂದು ಹಾರೈಸುವುದರ ಜೊತೆಗೆ ಅವರ ಸಮಗ್ರ ಕುಟುಂಬಕ್ಕೆ ಒಳ್ಳೆಯದಾಗಲೆಂದು ಆಶಿಸುತ್ತೇನೆ.
ಇತಿ ನಿಮ್ಮ ಗೆಳೆಯ,
ಸತ್ಯದೇವ,
ಇತಿಹಾಸ ಉಪನ್ಯಾಸಕರು,
ಸಾಗರ-ಶಿವಮೊಗ್ಗ ಜಿಲ್ಲೆ.