Surabhi

· KK PRINTERS &PUBLISHERS
4,5
2 resensies
E-boek
176
Bladsye
Graderings en resensies word nie geverifieer nie. Kom meer te wete

Meer oor hierdie e-boek

ಈಚೆಗೆ ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಹುಲುಸಾದ ಬೆಳೆ ಎದ್ದುಕಾಣುತ್ತಿದೆ. ಕತೆ, ಕವನ, ಕಾದಂಬರಿ ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಶಿಶುಸಾಹಿತ್ಯ, ವಿಚಾರಸಾಹಿತ್ಯ, ವಿಜ್ಞಾನಸಾಹಿತ್ಯ. ಹೀಗೆ ಹತ್ತು ಹಲವು ಬಗೆಗಳನ್ನು ವೈಶಿಷ್ಟö್ಯಮಯವಾಗಿ ತುಂಬಿಕೊಳ್ಳುತ್ತಿರುವ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಬರಹಗಳ ‘ಬರ’ಕಾಲಿಟ್ಟಿದೆ. ಕಳೆದ ಶತಮಾನ ಹೀಗಿರಲಿಲ್ಲ. ಆಗ ಸಂಶೋಧನಾ ರಂಗದಲ್ಲಿ ಅದರಲ್ಲೂ ಪ್ರಾಚೀನ ಸಾಹಿತ್ಯದ ಕುರಿತಾದ ಅಧ್ಯಯನ, ಅಧ್ಯಾಪನ, ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದವು . ಆಗಿನ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಕಮ್ಮಟ, ವಿಚಾರಸಂಕಿರಣ, ಪ್ರಚಾರೋಪನ್ಯಾಸಗಳು ಮೇಲುಗೈ ಪಡೆದಿದ್ದು ಅವುಗಳ ಫಲಗಳು ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದವು. ಆದರೆ ಈಗ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯಕೃತಿಗಳು ಶೈಕ್ಷಣಿಕ ಪಠ್ಯಗಳಿಂದ ದೂರ ಸರಿಯುತ್ತಿದ್ದು, ವಿದ್ವತ್‌ವಲಯದಲ್ಲೂ ಆಸಕ್ತಿ, ಚರ್ಚೆ, ಪ್ರಕಟಣೆ ತಾವುದೂ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತ್ಯಲ್ಲಿ ಡಾ. ಎಸ್. ರಾಮಮೂರ್ತಿ ಶರ್ಮ ಅವರ ‘ಸುರಭಿ’ಕೃತಿಯ ಪ್ರವೇಶ ಗಮನಾರ್ಹವಾಗಿದೆ. 

ಶ್ರೀಯುತರು ನಿತಾಂತ ಪಂಡಿತರು. ಸಂಸ್ಕೃತವನ್ನು ಅದರಲ್ಲೂ ಯಜುರ್ವೇದ ವನ್ನು ಸಾಧ್ಯಂತವಾಗಿ ಅಧ್ಯಯನ ಮಾಡಿಕೊಂಡವರು. ತೆಲುಗುಭಾಷೆ ಮತ್ತು ಸಾಹಿತ್ಯದ ಪರಿಚಯ ಉಳ್ಳವರು. ಅವರ ಚಿಂತನಕ್ರಮ ಮತ್ತು ಬರವಣಿಗೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡದ್ದು. ಪುರಾಣ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಮತ್ತು ಆಳವಾದ ಅರಿವು ಹಾಗೂ ಅದನ್ನು ಬಗೆದು ಕಾಣುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಅವರು ತಮ್ಮ ಪಿಎಚ್.ಡಿ ಪದವಿಗಾಗಿ “ಬಸವಣ್ಣ-ಒಂದು ಐತಿಹಾಸಿಕ ಮತ್ತು ಪೌರಾಣಿಕ ಸಮೀಕ್ಷೆ”- ಎಂಬ ವಿಷಯವನ್ನು ಆಯ್ದು ಕೊಂಡು ಸಾದರಪಡಿಸಿದ್ದಾರೆ. ಅಲ್ಲೂ ಕೂಡ ಕನ್ನಡ, ತೆಲುಗು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪಡಿಮೂಡಿದ ಬಸವಣ್ಣನ ಪೌರಾಣಿಕ ವ್ಯಕ್ತಿತ್ವವನ್ನು ತೌಲನಿಕ ಅಧ್ಯಯನ-ಸಮೀಕ್ಷೆಗಳ ಮೂಲಕ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 

Graderings en resensies

4,5
2 resensies

Meer oor die skrywer

Gradeer hierdie e-boek

Sê vir ons wat jy dink.

Lees inligting

Slimfone en tablette
Installeer die Google Play Boeke-app vir Android en iPad/iPhone. Dit sinkroniseer outomaties met jou rekening en maak dit vir jou moontlik om aanlyn of vanlyn te lees waar jy ook al is.
Skootrekenaars en rekenaars
Jy kan jou rekenaar se webblaaier gebruik om na oudioboeke wat jy op Google Play gekoop het, te luister.
E-lesers en ander toestelle
Om op e-inktoestelle soos Kobo-e-lesers te lees, moet jy ’n lêer aflaai en dit na jou toestel toe oordra. Volg die gedetailleerde hulpsentrumaanwysings om die lêers na ondersteunde e-lesers toe oor te dra.