gundana avantara

· KK PRINTERS &PUBLISHERS
4.8
17則評論
電子書
104
評分和評論未經驗證  瞭解詳情

關於本電子書

ಸಾಮಾನ್ಯವಾಗಿ ಎಲ್ಲ ಬರಹಗಾರರೂ ತಮ್ಮ ಸಾಹಿತ್ಯ ಕೃಷಿಯನ್ನು ಯಾವುದಾದರೂ ಒಂದು ಸಾಹಿತ್ಯ ಪ್ರಕಾರಕ್ಕೆ ಸೀಮಿತಗೊಳಿಸಿಕೊಳ್ಳುವು ದುಂಟು. ಹಾಗೆಂದ ಮಾತ್ರಕ್ಕೆ ಒಂದು ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವವರು ಬೇರೊಂದು ಪ್ರಕಾರದಲ್ಲಿ ಕೈ ಆಡಿಸುವಂತಿಲ್ಲ ಎಂದೇನಿಲ್ಲ. ಬಹಳಷ್ಟು ಮಂದಿ ಒಂದಕ್ಕಿAತ ಹೆಚ್ಚಿನ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿಕೊಂಡು ಬರುತ್ತಿದ್ದಾರೆ. ಹಿಂದೊಮ್ಮೆ ಹಿರಿಯ ಸಾಹಿತಿ ಶ್ರೀ ಗೊ ರು ಚೆನ್ನಬಸಪ್ಪನವರು ನನಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಬರೆದುಕೊಂಡು ಗುರಿ ಚದುರಿಹೋಗುವುದು ಬೇಡ. ಕೆಲವನ್ನು ತ್ಯಾಗ ಮಾಡಿದೆ ಅಂದುಕೊAಡರೂ ಚಿಂತೆಯಿಲ್ಲ. ಯಾವುದಾದರೂ ಒಂದು ಪ್ರಕಾರಕ್ಕೆ ಅಂಟಿಕೊAಡು ಅದರಲ್ಲೇ ಸಾಧನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದರು. ಆದರೂ, ಮನಸ್ಸು ನನ್ನ ಮಾತು ಕೇಳಲಿಲ್ಲ. ಮೊದಮೊದ¯ಲ್ಲಿ ಕವನಗಳನ್ನಷ್ಟೇ ಬರೆಯುತ್ತಿದ್ದವನು ಕತೆಗಾರನಾದೆ. ಜೊತೆಜೊತೆಗೆ ಭಾವಗೀತೆಗಳನ್ನು ಬರೆದೆ. ಮತ್ತೆ ನಾಟಕಕಾರನಾದೆ. ಪ್ರವಾಸ ಸಾಹಿತ್ಯದ ಒಂದು ಕೃತಿಯನ್ನೂ ರಚಿಸಿದೆ. ವಿಚಾರ ಸಾಹಿತ್ಯವಾಯ್ತು. ಹನಿಗವನಗಳನ್ನು ಬರೆದೆ. ಆರೂ ಷಟ್ಪದಿಗಳ ಮತ್ತು ಮೂರೂ ರಗಳೆಗಳನ್ನು ಪ್ರಯೋಗಿಸಿ ‘ಚಂದನಾ ಕಾವ್ಯ’ ವನ್ನು ಬರೆದೆ. ಎರಡು ಕಾದಂಬರಿಗಳೂ ಹೊರಬಂದವು. ಮಕ್ಕಳಿಗಾಗಿ ಬಾಲಗೀತೆಗಳ ಗುಚ್ಛವಾಗಿ ‘ಮಕ್ಕಳ ಹಾಡು’ ರಚನೆಯಾಯ್ತು. 

ಹೀಗೆ ಬೇರೆಬೇರೆ ಪ್ರಕಾರಗಳಲ್ಲಿ ಕೃತಿರಚನೆಯೊಂದು ಗೀಳೂ ಅಲ್ಲ ಹುಚ್ಚೂ ಅಲ್ಲ. ಹೊಸದೊಂದು ಹೊಳಹು ಕತೆಯಾಗಲೂ ಯೋಗ್ಯವೆನಿಸಿದಾಗ ಅದನ್ನು ಕತೆಗೆ ಅಳವಡಿಸಳವಡಿಸುವುದು. ಪರಿಕಲ್ಪನೆಯು ವಿಶಾಲವಾಗಿ ಕಂಡುಬAದರೆ ಕಾದಂಬರಿಯನ್ನಾಗಿಸುವುದು. ಕೆಲವು ವಿಷಯಗಳು ಮನಸ್ಸಿಗೆ ಬರುತ್ತಿರುವಾಗಲೇ ನಾಟಕವಾಗಿ ಕಾಣತೊಡಗುತ್ತದೆ. ಇನ್ನು ಭಾವಗೀತೆಯಂತೂ ಗಾಳಿಯ ಸುಳಿವಿಲ್ಲದ ಸಮಯದಲ್ಲಿ ಎಲ್ಲಿಂದಲೋ ಬೀಸಿ ಬಂದು ಕ್ಷಣಕಾಲ ತಂಪೆರೆದು ಸರಿದುಹೋಗುವ ತಂಗಾಳಿಯ ಅಲೆಯಂತೆ ಮನಸ್ಸಿಗೆ ಬಂದು ಕವನವಾಗಿ ನಿಂತುಬಿಡುತ್ತವೆ. ಕೆಲವು ವಿಶೇಷ ವಿಷಯಗಳನ್ನು ಬರಹಕ್ಕೆ ಇಳಿಸಲು ಯೋಚಿಸಿದಾಗ ಅದಕ್ಕೊಂದು ಛಂದಸ್ಸನ್ನಾರಿಸುವುದೇ ಸವಾಲಾಗಿ ನಿಲ್ಲುತ್ತದೆ.

ಇಷ್ಟೆಲ್ಲ ಕಾರ್ಯಗಳ ನಡುವೆ ‘ಕಚಗುಳಿ’ ಪತ್ರಿಕೆಗಾಗಿ ಗುಂಡ ಎಂಬ ಪಾತ್ರವನ್ನು ಇಟ್ಟುಕೊಂಡು ತಿಳಿಹಾಸ್ಯದ ಹರಟೆಗಳನ್ನು ಬರೆದುಕೊಡುತ್ತಿದ್ದೆ. ಆ ಹರಟೆಗಳನ್ನೇ ಇಲ್ಲಿ ಸಂಗ್ರಹಿಸಿ ‘ಗುಂಡನ ಅವಾಂತರ’ ಹೆಸರಿನಲ್ಲಿ ತಮ್ಮ ಮಡಿಲಿಗೆ ಇರಿಸಿದ್ದೇನೆ. ಲೇಖನಗಳನ್ನು ಪ್ರಕಟಿಸಿದ ‘ಕಚಗುಳಿ’ ಪತ್ರಿಕೆಗೆ ಧನ್ಯವಾದಗಳು. ಪ್ರಸ್ತುತ ಇದನ್ನು ಪ್ರಕಟಿಸುತ್ತಿರುವ ಪ್ರಕೃತಿ ಪ್ರಕಾಶನ ಸಂಸ್ಥೆಗೆ ಅನಂತಾನAತ ಧನ್ಯವಾದಗಳು.

- ವಿ ವಿ ಗೋಪಾಲ್

評分和評論

4.8
17則評論

關於作者

為這本電子書評分

歡迎提供意見。

閱讀資訊

智慧型手機與平板電腦
只要安裝 Google Play 圖書應用程式 Android 版iPad/iPhone 版,不僅應用程式內容會自動與你的帳戶保持同步,還能讓你隨時隨地上網或離線閱讀。
筆記型電腦和電腦
你可以使用電腦的網路瀏覽器聆聽你在 Google Play 購買的有聲書。
電子書閱讀器與其他裝置
如要在 Kobo 電子閱讀器這類電子書裝置上閱覽書籍,必須將檔案下載並傳輸到該裝置上。請按照說明中心的詳細操作說明,將檔案傳輸到支援的電子閱讀器上。