Ithihasika Innuku Nota

KK PRINTERS &PUBLISHERS
E-book
276
Mga Page
Hindi na-verify ang mga rating at review  Matuto Pa
16% pagbaba ng presyo sa Hul 1

Tungkol sa ebook na ito

ಲೇಖಕರ ನುಡಿ

ಅತ್ಯಂತ ಅಪರೂಪವಾದ ಮತ್ತು ಅಮೂಲ್ಯವಾದ ಇತಿಹಾಸದ ವಿಚಾರಗಳನ್ನು ಆಧರಿಸಿದ ವಿಶಿಷ್ಟವಾದ ಲೇಖನ ಮಾಲೆಯೇ ಐತಿಹಾಸಿಕ ಇಣುಕು ನೋಟ ಅತಿ ಹೆಚ್ಚು ಕುತೂಹಲಭರಿತವಾದ ಮತ್ತು ರೋಮಾಂಚನ ಕಾರಿಯಾದ ಗತಕಾಲದ ಘಟನಾಸರಣಿಗಳಿಂದಾಯ್ದ ಮತ್ತು ಭೂತಕಾಲದಲ್ಲಿನ ಆಗು-ಹೋಗುಗಳಿಗೆ ಸಂಬAಧಿಸಿದ ಆಕರ್ಷಕ ವಿಚಾರಧಾರೆಗಳು ಪರಿಶುದ್ಧ ನೀರು ಘನೀಕರಿಸಿ ಮಂಜುಗಡ್ಡೆಯಾದAತೆ ಈ ಲೇಖನದಲ್ಲಿ ರಾಶಿಗಟ್ಟೆ ನಿಂತಿವೆ. ಅವು ಸಹೃದಯರ ಓದಿನೊಂದಿಗೆ ಮತ್ತೆ ನೀರಾಗಿ ಹರಿದು ಅವರ ಮೈ-ಮನದೊಳಗೆ ಸೇರಿ ಫಲಪ್ರದವಾಗುತ್ತವೆ ಎಂಬುದೇ ನನ್ನ ಆಶಯ.

ಇತಿಹಾಸ ಎಂದರೆ ಭೂತಕಾಲದಲ್ಲಿ ಆಗಿಹೋದ ಘಟನಾವಳಿಗಳ ಒಂದು ಸುಸಂಬದ್ಧವಾದ ದಾಖಲೆಯಾಗಿದೆ. ಅದರಲ್ಲಿ ಹಿಂದಿನಕಾಲದಲ್ಲಿ ಆಳಿ ಅಳಿದು ಹೋದ ರಾಜ-ಮಹಾರಾಜರ ಬಗ್ಗೆ ಅಂದಿನ ಸಾಮಾಜಿಕ ಸಮಸ್ಯೆಗಳು, ಸ್ಥಿತಿ-ಗತಿಗಳು ಮತ್ತು ಸಾಮರಸ್ಯಗಳ ಬಗ್ಗೆ ಆರ್ಥಿಕ ಅಭಿವೃದ್ಧಿ ಹಾಗೂ ಅನಭಿವೃದ್ಧಿಗಳ ಬಗ್ಗೆ ಚಿಂತನ ಮಂಥನಗಳು ಹಾಲಿನಲ್ಲಿ ಕೆನೆ ಹೆಪ್ಪುಗಟ್ಟಿರು ವಂತೆ ಅಂತರ್ಗತವಾಗಿರುತ್ತವೆ. ಕೆಚ್ಛೆದೆಯ ಸಾಮ್ರಾಟರ ಧೀರೋದ್ಧಾತ ಸಾಹಸ ಗಾಥೆಗಳು ರೋಚಕ ರೀತಿಯಲ್ಲಿ ರಾರಾಜಿಸುತ್ತಿರುತ್ತವೆ. ರಾಜಕೀಯ ಸುಸಂಘಟನೆ ಯಿಂದಾದ ಯಶಸ್ವೀಭರಿತ ರಾಜ್ಯಾಡಳಿತ, ಇನ್ನೊಂದೆಡೆಗೆ ರಾಜಕೀಯ ಅರಾಜಕತೆಯಿಂದ ರಾಜ್ಯಾಡಳಿತದಲ್ಲಿ ಕಂಡು ಬಂದ ವಿಫಲತೆಯ ದುರಂತ ಕಥೆ ಇದೂ ಸಹ ಇತಿಹಾಸದ ಪುಟಗಳಲ್ಲಿ ದಾಖಲುಗೊಂಡು ಮೌನಗೀತೆ ಪಾಡುತ್ತಿರುತ್ತವೆ.

ಸಾಹಿತ್ಯ, ಸಂಗೀತ, ನೃತ್ಯ, ವರ್ಣಚಿತ್ರಕಲೆ, ವಾಸ್ತುಶಿಲ್ಪ ಈ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬAಧಿಸಿದ ನೂರಾರು ಸಂಗತಿಗಳು ಇತಿಹಾಸದ ಅವಿಭಾಜ್ಯ ಅಂಗಗಳಾಗಿ ಅಲ್ಲಿನ ಗ್ರಂಥಗಳ ಪುಟಗಳನ್ನು ಅಲಂಕರಿಸಿ ಕೊಂಡಿರು ತ್ತವೆ. ಧರ್ಮ ಸಂಸ್ಥಾಪನೆ, ಧರ್ಮ ಪ್ರಸಾರ, ಧರ್ಮಗಳ ಮಹತ್ವ, ವಿಭಿನ್ನ ಧರ್ಮಾವಲಂಬನೆಯ ಜನಗಳ ಧಾರ್ಮಿಕ ನಂಬಿಕೆ ಮತ್ತು ಕಟ್ಟುಪಾಡುಗಳು ವಿಧಿ-ವಿಧಾನಗಳು ಇವೆಲ್ಲವುಗಳು ಇತಿಹಾಸದ ಹೊತ್ತಿಗೆಗಳಲ್ಲಿ ಮಡುಗಟ್ಟೆ ನಿಂತಿರುತ್ತವೆ. ಸಾಮಾಜಿಕ, ಧಾರ್ಮಿಕ, ಹಾಗೂ ಸಾಂಸ್ಕೃತಿಕ ವಿಷಯಾಂಶಗಳು ಜಗತ್ತಿನ ಜನಗಳ ನಡುವೆ ಪರಸ್ಪರ ವಿಲೇವಾರಿಯಾಗುವ ಬಗೆಗಳನ್ನು ಕುರಿತು ಇತಿಹಾಸದಲ್ಲಿ ಬಣ್ಣಿಸಲಾಗಿರುತ್ತವೆ. ಆದ್ದರಿಂದ ಇತಿಹಾಸದ ಓದು ಜನರಿಗೆ ಒಂದು ಬಗೆಯ ಮನರಂಜನೆಯನ್ನು ತಂದAತೆಯೇ ಅವರ ಬೌದ್ಧಿಕ ವಿಕಾಸಕ್ಕೂ ದಾರಿಮಾಡಿಕೊಡುತ್ತದೆ.

‘ಐತಿಹಾಸಿಕ ಇಣುಕು ನೋಟ’ ಎಂಬ ಈ ನನ್ನ ಕೃತಿಯಲ್ಲಿ ಭಾರತದಲ್ಲಿ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಅವುಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕ ವರ್ಗದವರು ತಮ್ಮ ಮಾಲೀಕರೊಂದಿಗೆ ನಡೆಸುವ ಸಂಘರ್ಷಗಳು, ಅವುಗಳ ಬೆಳವಣಿಗೆ ಮತ್ತು ಅಧಃಪತನ ಮುಂತಾದವುಗಳ ಬಗ್ಗೆ ತಿಳಿಸಿದಂತೆಯೇ ಅರಸೊತ್ತಿಗೆಯವರು ತಮ್ಮ ಸ್ವಾರ್ಥಕ್ಕಾಗಿ ದೇಶದ ಸಂಪತ್ತನ್ನು ನೀರಿನಂತೆ ಹೇಗೆ ಅಪವ್ಯಯ ಮಾಡಿದರು ಎಂಬುದನ್ನು ಮಾಧೆೆÆÃಸಿಂಗನAತಹ ದೊರೆಯನ್ನು ನಿದರ್ಶನವಾಗಿ ಬಳಸಿ ತಿಳಿಸಲಾಗಿದೆ.

ಕೆಲವೊಂದು ಸಂದರ್ಭಗಳಲ್ಲಿ ಕೆಲವು ಐತಿಹಾಸಿಕ ಘಟನೆಗಳು ಮತ್ತು ಐತಿಹಾಸಿಕ ಸ್ಥಳಗಳು ಪೌರಾಣಿಕ ಘಟನಾವಳಿಗಳೊಂದಿಗೆ ಮೇಳೈಸುವುದರ ಮೂಲಕ ಓದುಗರ ಮನದಲ್ಲಿ ವಿಸ್ಮಯವನ್ನು ಮೂಡಿಸುತ್ತವೆ ಎಂಬುದನ್ನು ಆನೆಗೊಂದಿಯ ಐತಿಹಾಸಿಕ-ಭೌಗೋಳಿಕ-ಪೌರಾಣಿಕ ಮಹತ್ವಗಳು ಎಂಬ ಲೇಖನದಲ್ಲಿ ಪಡಿ ಮೂಡಿಸಲಾಗಿದೆ. ಗತಕಾಲದಲ್ಲಿ ಆಳಿದ ರಾಜ-ಮಹಾರಾಜರು, ಸುಲ್ತಾನರು, ಸಾಮ್ರಾಟರು ತಮ್ಮ ಆಳ್ವಿಕೆಯ ಹೆಗ್ಗುರುತಿಗಾಗಿ ಮತ್ತು ಚಿರಂತನ ಸವಿನೆನಪಿಗಾಗಿ ವೈಭೋತಪೇತ ಸ್ಮಾರಕಗಳನ್ನು ನಿರ್ಮಿಸಿರುವ ಬಗ್ಗೆ ಹಾಗೂ ತಾವು ಪರದೇಶದವರಾದರೂ ಭಾರತೀಯ ಸಂಸ್ಕೃತಿಗೆ ಅವರು ನೀಡಿರುವ ಅಜರಾಮರ ಕೊಡುಗೆಗಳ ಬಗ್ಗೆ ಪ್ರಸ್ತುತ ಲೇಖನ ಮಾಲೆಯಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ದೇಶದ ಪಟ್ಟ ಭದ್ರ ಹಿತಾಸಕ್ತಿಯ ಮೇಲ್ವರ್ಗದ ಜನರು ಕೆಳವರ್ಗದ ಜನರಿಂದ ಆಸ್ತಿ-ಪಾಸ್ತಿಯನ್ನು ಕಸಿದುಕೊಂಡು ಅವರನ್ನು ನಿರ್ಗತಿಕರನ್ನಾಗಿ ಮಾಡಿ, ನಂತರ ಅವರನ್ನು ತಮ್ಮ ಊಳಿಗದವರನ್ನಾಗಿ ನೇಮಿಸಿಕೊಂಡು ಗಾಣದ ಎತ್ತುಗಳಂತೆ ದುಡಿಸುತ್ತಾ ನಿರಂತರವಾಗಿ ಶೋಷಿಸುವುದು ಇದರ ಪರಿಣಾಮವಾಗಿ ರೊಚ್ಚಿಗೆದ್ದ ಅಂಥ ಶೋಷಿತ ಜನ ತಮ್ಮ ಒಡೆಯರ ವಿರುದ್ಧವಾಗಿ ದಂಗೆ ಏಳುವುದು. ಇಂತಹ ವಿಷಯಗಳ ಬಗೆಗಿನ ಮೈನವಿರೇಳಿಸುವ ಉಲ್ಲೇಖಗಳು ಇದರಲ್ಲಿ ಅಡಕವಾಗಿವೆÉ.

ಬ್ರಿಟಿಷರು ಪರಕೀಯರಾಗಿದ್ದು ಸಾಮ್ರಾಜ್ಯಶಾಹಿ ನೀತಿಗೆ ಅನುಗುಣವಾಗಿ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿ ಶತ-ಶತಮಾನಗಳವರೆಗೆ ಅವರು ಭಾರತೀಯರನ್ನು ದರ್ಪ-ದೌರ್ಜನ್ಯಗಳಿಂದ ಆಳಿದರು ಮತ್ತು ಅಡಿಗಡಿಗೂ ಭಾರತೀಯರನ್ನು ಕ್ರೂರವಾಗಿ ನಡೆಸಿಕೊಂಡರು. ಇಷ್ಟಾದರೂ ಅದೇ ಬ್ರಿಟಿಷರಲ್ಲಿ ಭಾರತೀಯರ ಬಗ್ಗೆ ಪ್ರೀತಿ-ಪ್ರೇಮ-ಅನುಕಂಪಗಳನ್ನು ಹೊಂದಿದ್ದ ಅದೆಷ್ಟೋ ಅಧಿಕಾರಿಗಳಿದ್ದು ಅವರು ಭಾರತೀಯರ ಪಾಲಿಗೆ ಮಾನವೀಯ ಸೆಲೆಗಳಾಗಿದ್ದರು. ಭಾರತದ ಆರ್ಥಿಕ-ಸಾಮಾಜಿಕ ಪ್ರಗತಿಗೆ ವರದಾನವಾಗಿ ಬಂದಿದ್ದರು ಎಂಬುದನ್ನು ಲಾರ್ಡ್ ಜಾರ್ಜ್ ರಿಪನ್‌ರವರ ಉದಾಹರಣಗೆಯೊಂದಿಗೆ ವಿವರಿಸಲಾಗಿದೆ.

ನೈಸರ್ಗಿಕ ವಿಕೋಪಗಳ ಸವಾಲುಗಳನ್ನು ಜಗತ್ತಿನ ಎಲ್ಲಾ ರಾಷ್ಟçಗಳೂ ಒಂದಲ್ಲಾ ಒಂದು ರೀತಿಯಲ್ಲಿ ಮತ್ತು ಒಂದಲ್ಲಾ ಒಂದು ಕಾಲದಲ್ಲಿ ಎದುರಿಸಲೇಬೇಕಾಗುತ್ತದೆ. ಅವು ಅತಿವೃಷ್ಟಿ-ಅನಾವೃಷ್ಟಿಗಳಾಗಿರಬಹುದು. ಬರಗಾಲ ಅಥವಾ ಕ್ಷಾಮಗಳಾಗಿರಬಹುದು. ಇಲ್ಲವೆ ಯಾವುದೋ ಭೀಕರವಾದ ಸಾಂಕ್ರಾಮಿಕ ರೋಗಗಳಾಗಿರಬಹುದು. ಇವು ಬಂದು ಏಕಾ-ಏಕಿ ರಾಚಿದಾಗೆ ಜನಗಳು ಅಪಾರವಾದ ಸಾವು-ನೋವುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂಕಷ್ಟಗಳ ಸಾದೃಶ ಸನ್ನಿವೇಶಗಳನ್ನು ಇತಿಹಾಸದಲ್ಲಿ ಕಣ್ಣಿಗೆ ಕಟ್ಟುವಂತೆ ನಮೂದಿಸಲಾಗುತ್ತದೆ ಎಂಬುದನ್ನು ತಿಳಿಸಲು ಭಾರತವನ್ನು ನಲುಗಿಸಿದ ಭೀಕರ ಕ್ಷಾಮಗಳು ಎಂಬ ಲೇಖನವನ್ನು ಇದರಲ್ಲಿ ಅಳವಡಿಸಲಾಗಿದೆ.

ಹೀಗೆ ಹತ್ತು ಹಲವಾರು ಇತಿಹಾಸದ ಆಯಕಟ್ಟಿನ ಭಾಗಗಳನ್ನು ಆಧರಿಸಿದ ಅದರಲ್ಲಿಯೂ ವಿಶೇಷವಾಗಿ ಭಾರತದ ಇತಿಹಾಸದಿಂದ ಆಯ್ದುಕೊಂಡ ಐತಿಹಾಸಿಕ ಸರಣಿಯ ವಿಚಾರಗಳು ಈ ಲೇಖನ ಮಾಲೆಯಲ್ಲಿ ಅಂತರ್ಗತಗೊAಡಿರುವುದರಿAದ ಇದು ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೂ ಬಹಳ ಅನುಕೂಲವಾಗುವುದರಿಂದ ಅಂಥವರು ಪ್ರಸ್ತುತ ಸದರಿ ಪುಸ್ತಕದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ.

- ಬಿ.ಸಿ. ಶಿವಪ್ಪ, ಬನದ ಕೊಪ್ಪ

Tungkol sa may-akda

‘ಮುನ್ನುಡಿ’

ಶ್ರೀ ಬಿ.ಸಿ. ಶಿವಪ್ಪನವರು ಉತ್ತಮವಾದ ಸಾಹಿತ್ಯ ಸೃಷ್ಟಿಯನ್ನು ಮೈಗೂಡಿಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಬಹುಮುಖ ವ್ಯಕ್ತಿತ್ವವನ್ನು ಹೊಂದಿರುವವರು. ಮತ್ತು ಅಧ್ಯಯನ ಶೀಲತೆ, ವಿಮರ್ಶಾತ್ಮಕ ಗುಣ. ವೈಚಾರಿಕ ಪ್ರಜ್ಞೆಯುಳ್ಳವರು ಉತ್ತಮ ಸಹೃದಯರೂ ಆಗಿದ್ದಾರೆ. ಸಾಹಿತ್ಯದ ರೂಪಗಳಾದ ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ ಹಾಗೂ ವೈಚಾರಿಕ ಪ್ರಬಂಧಗಳನ್ನು ಅರ್ಥಪೂರ್ಣವಾಗಿ ರಚಿಸುವಲ್ಲಿ ಪ್ರಭುತ್ವ ಪಡೆದಿದ್ದಾರೆ. ಈ ಪ್ರಸ್ತುತವಾಗಿ ಐತಿಹಾಸಿಕ ಪ್ರಜ್ಞೆಯುಳ್ಳವರಾದ ಇವರು ಗತಕಾಲದಲ್ಲಿ ಆಗಿಹೋಗಿರುವ ವಿಶೇಷವಾದ ಘಟನೆಗಳನ್ನು ಸಂದರ್ಭಗಳನ್ನು ಸೂಕ್ಷö್ಮವಾಗಿ ಅವಲೋಕಿಸಿ ತಮ್ಮ ತೀಕ್ಷö್ಣವಾದ ಬುದ್ಧಿಶಕ್ತಿಯಿಂದ ಅಪರೂಪವಾದ ವಿಷಯಗಳನ್ನು ಶೋಧಿಸಿ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದ್ದಾ ರೆಂದರೆ ಅತಿಶಯೋಕ್ತಿಯಾಗಲಾರದು ಎಂಬ ನನ್ನ ಮನದಾಳದ ಅಭಿಪ್ರಾಯ ವಾಗಿರುತ್ತದೆ.

ನಾನು ಕಂಡAತೆ ಶ್ರೀಯುತ ಬಿ.ಸಿ. ಶಿವಪ್ಪರವರು ವೃತ್ತಿಯಲ್ಲಿ ಬೋಧನೆ ಮಾಡುತ್ತಾ ಪ್ರವೃತ್ತಿಯಾಗಿ ಶೋಧನೆ ಬರಹ ಮತ್ತು ವಿದ್ಯಾರ್ಥಿಗಳಿಗೆ ಮನಮುಟ್ಟು ವಂತೆ ಬೋಧಿಸುವ ಕೌಶಲ್ಯ, ಇತಿಹಾಸವನ್ನು ಬೋಧಿಸುವಾಗ ಆ ಘಟನಾವಳಿ ಗನುಗುಣವಾಗಿ ಕಣ್ಣಿಗೆಟ್ಟುವಂತೆ ತುಂಬಾ ಅರ್ಥಗರ್ಭಿತವಾಗಿ ಇತಿಹಾಸದ ವಿಷಯಗಳನ್ನು ವಿದ್ಯಾರ್ಥಿಗಳ ಹೃದಯದಲ್ಲಿ ಅಚ್ಚು ಒತ್ತಿದಂತೆ ಪರಿಣಾಮಕಾರಿ ಯಾದ ಬೋಧನಾ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾರೆAದು ತಿಳಿಯ ಬಹುದು.

ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು ಶಿಸ್ತಿನಲ್ಲಿ ತಾವಾಯಿತು ತಮ್ಮ ಬೋಧನೆ ಬರಹ ಹಾಗೂ ತಮ್ಮ ಪ್ರೀತಿ ವಿದ್ಯಾರ್ಥಿಗಳ ಒಡನಾಟದಿಂದ ವಿದ್ಯಾರ್ಥಿ ಗಳಲ್ಲಿಯೂ ಇವರು ವೈಚಾರಿಕ ಐತಿಹಾಸಿಕ ಪ್ರಜ್ಞೆಯನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ವಿದ್ಯಾರ್ಥಿಗಳು ಸಹ ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ಇವರು ಇಷ್ಟೆಲ್ಲಾ ಸಾಹಿತ್ಯ ಸೃಷ್ಟಿಸುವ ವಿದ್ವತ್ತು ಪರಿಣಾಮಕಾರಿಯಾದ ಬೋಧನಾ ಕೌಶಲ್ಯ ಹೊಂದಿದ್ದರೂ ಸಹ ಸದಾ ಮಂದಸ್ಮಿತರಾಗಿ ಲವಲವಿಕೆಯಿಂದ ಸ್ನೇಹಿತರನ್ನು ಮಾತನಾಡಿಸುವ ಇವರ ಹೃದಯವಂತಿಕೆ ಅಂತರAಗದ ನಿರ್ಮಲ ಮನಸ್ಥಿತಿಯನ್ನು ಪ್ರಕಟಿಸುತ್ತೆ.

ಇನ್ನೂ ಇವರು ರಚಿಸಿರುವ ಸಾಹಿತ್ಯದ ಕೃತಿಗಳನ್ನು ಗಮನಹರಿಸಿದರೆ ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ. ಹೀಗೆ ಹತ್ತು ಹಲವಾರು ಮಜಲುಗಳಲ್ಲಿ ಕೃಷಿ ಮಾಡಿ ವಿಶೇಷವಾದ ವಿಷಯ ವಸ್ತುವನ್ನು ಆಯ್ಕೆಮಾಡಿ ಕೊಂಡು ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಅದು ಓದುಗರನ್ನು ಕುತೂಹಲ ಕೆರಳಿಸಿಕೊಂಡು ಹೋಗುತ್ತದೆ. ಅಂತಹ ಬರವಣಿಗೆಯ ಶೈಲಿ ಉತ್ತಮವಾಗಿದೆ.

ಇವರು ರಚಿಸಿರುವ ಕಾದಂಬರಿ ‘ಕಾಣದ ಕೈಗಳು’ ಓದಿದಾಗ ಅನೇಕ ನಿಗೂಢವಾದ ವಿಷಯಗಳು ಪ್ರಸ್ತುತವೆನಿಸುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಾಡಿನ ಸಂಪತ್ತನ್ನು ಕಾಡುಗಳ್ಳರು ಹೇಗೆ ಕಬಳಿಸುತ್ತಾರೆ. ಅದು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಹಾಗೂ ಸೂರ್ಯಾಸ್ತ ಮಾನಕ್ಕೆ ಹೆಸರಾದ ಆಗುಂಬೆ ಪ್ರದೇಶದ ಸುತ್ತಮುತ್ತಲ ಸ್ಥಳವನ್ನು ಕೊಳ್ಳೆ ಹೊಡೆಯುವ ಕಾಡುಗಳ್ಳರು ರಾಜಕೀಯ ಪ್ರತಿನಿಧಿಗಳ ತಾಳಕ್ಕೆ ಕುಣಿಯುವ ಇವರು ನಮ್ಮನಾಡಿನ ಸಂಪನ್ಮೂಲವನ್ನು ಲೂಟಿ ಮಾಡುವ ಅನೇಕ ವಿಷಯಗಳು ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದೆನಿಸುತ್ತದೆ.

ಇವರು ರಚಿಸಿರುವ ಕಾದಂಬರಿ ‘ಕಾಣದ ಕೈಗಳು’ ಬಗ್ಗೆ ಚರ್ಚಿಸುತ್ತಿರುವಾಗ ನಮ್ಮ ಎಸ್. ಎಸ್. ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕರಾದ ಶ್ರೀ ನಾಗರಾಜರವರು ಒಂದು ಮಾತು ಇಲ್ಲಿ ಉಲ್ಲೇಖಿಸುವುದು ಪ್ರಸ್ತುತವೆನಿಸುತ್ತೆ. ಅವರು ಮಾತನಾಡುತ್ತಾ ಶಿವಮೊಗ್ಗದ ಪ್ರಕೃತಿ ರುದ್ರರಮಣೀಯವಾಗಿದೆ ಧಾರಾಕಾರವಾಗಿ ಸುರಿಯುವ ಮಳೆ ಬರುವ ದೃಶ್ಯಗಳು ಕಣ್ಣಿಗೆ ಕಟ್ಟುವಂತಿರುತ್ತದೆ. ಅದು ನಮ್ಮ ಮಿತ್ರರಾದ ಶ್ರೀ ಬಿ.ಸಿ. ಶಿವಪ್ಪರವರು ಬರೆದ ಕಾದಂಬರಿ ‘ಕಾಣದ ಕೈಗಳು’ ಓದಿದರೆ ತಿಳಿಯುತ್ತೆ. ಶಿವಮೊಗ್ಗದ ನಿಸರ್ಗ, ಸಂಪತ್ತು ಎಲ್ಲ ಅಕ್ಷರಶಃ ಸತ್ಯವೆನಿಸುತ್ತದೆ ಎಂದು ನಾವು ಔಪಚಾರಿಕವಾಗಿ ಮಾತನಾಡುವ ಸಂದರ್ಭದಲ್ಲಿ ಹೇಳಿದ ಮಾತುಗಳು ಪ್ರಸ್ತುತವೆನಿಸುತ್ತವೆ ನಿಜವೆನಿಸುತ್ತದೆ. ಅಂದರೆ ಅಷ್ಟು ಅರ್ಥಪೂರ್ಣವಾಗಿ ಕಾದಂಬರಿಯ ವಸ್ತು ನಿರೂಪಣೆಯ ಶೈಲಿ, ವಿಷಯ ವಸ್ತು ಓದುಗರ ಕುತೂಹಲ ಕೆರಳಿಸಿಕೊಂಡು ಹೋಗುತ್ತದೆ.

ಆಧುನಿಕ ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳೇ ಕುಸಿಯುತ್ತಿವೆ. ನ್ಯಾಯ, ನೀತಿ, ಪ್ರಾಮಾಣಿಕತೆ, ಸತ್ಯ, ತತ್ವಸಿದ್ಧಾಂತಗಳನ್ನು ಗಾಳಿಗೆತೂರಿ ಅನ್ಯಾಯ, ಅನೀತಿ, ಅಪ್ರಾಮಾಣಿಕತೆಯಿಂದ ಮಾನವನ ದುರಾಸೆಯಿಂದ ಸ್ವಾರ್ಥದಿಂದ ನಾಡಿನ ಅರಣ್ಯಸಂಪತ್ತು ನಾಶಮಾಡಿಕೊಂಡು ತಾವು ಶ್ರೀಮಂತರಾಗಿ ಐಶಾರಾಮಿ, ಜೀವನ ನಡೆಸುತ್ತಿದ್ದಾರೆ. ಸಮಾಜದಲ್ಲಿ ಸುಸಂಸ್ಕೃತ ಮುಖವಾಡಗಳನ್ನು ಧರಿಸಿ ಬದುಕುತ್ತಿದ್ದಾರೆ ಎಂಬುವುದು ‘ಕಾಣದ ಕೈಗಳು’ ಕಾದಂಬರಿ ಓದಿದಾಗ ಮನದಟ್ಟಾಗುತ್ತದೆ. ಒಟ್ಟಾರೆ ಕಾದಂಬರಿ ಅರ್ಥಪೂರ್ಣ ವಾಗಿ ಮೂಡಿ ಬಂದಿದೆ. ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ Ã ಕಾದಂಬರಿಯ ನೀಡಿದ ಕೊಡುಗೆ ಪ್ರಸ್ತುತವೆನಿಸಿದೆ ಅದರ ಎಲ್ಲಾ ಶ್ರೇಯಸ್ಸು ಶಿವಪ್ಪರವರಿಗೆ ಸಲ್ಲುತ್ತದೆ.

ನೂತನವಾಗಿ ಇತಿಹಾಸದ ವಿಷಯಕ್ಕೆ ಸಂಬAಧಿಸಿದ ‘ಐತಿಹಾಸಿಕ ಇಣುಕು ನೋಟ’ ಎಂಬ ಶಿರೋನಾಮೆಯಿಂದ ಪ್ರಕಟಗೊಳ್ಳುತ್ತಿರುವ ಪ್ರಬಂಧ ಸಂಕಲನಕ್ಕೆ ಮುನ್ನುಡಿ ಬರೆಯಲು ತುಂಬಾ ಹೆಮ್ಮೆಯಾಗುತ್ತದೆ. ಇತಿಹಾಸದ ಕೆಲವು ಅದ್ಭುತವಾದ ವಿಶೇಷವಾದ ಘಟನಾವಳಿಗಳನ್ನು ಆಧಾರವಾಗಿಟ್ಟುಕೊಂಡು ವೈಚಾರಿಕವಾಗಿ, ಬೌದ್ಧಿಕವಾಗಿ ಆಲೋಚಿಸಿ ರಚಿಸಿರುವ ಈ ಪ್ರಬಂಧ ಸಂಕಲನ ಬಹಳ ಅರ್ಥಪೂರ್ಣವೆನಿಸುತ್ತಿದೆ.

ಈ ಗ್ರಂಥದಲ್ಲಿ ಪ್ರಕಟಗೊಳ್ಳುತ್ತಿರುವ ಪ್ರಬಂಧಗಳಲ್ಲಿ ಅನೇಕ ಮಹತ್ವದಾಯಕ ವಾದ ವಿಷಯಗಳು ಮೂಡಿ ಬಂದಿವೆೆ. ಅದರಲ್ಲಿ ‘ಭಾರತದ ಸ್ವಾತಂತ್ರö್ಯಕ್ಕಾಗಿ ತ್ಯಾಗ ಬಲಿದಾನಗೈದ ಹುತಾತ್ಮರು’ ಹಾಗೂ ‘ಕನ್ನಡಿಗರಿಗೇ ಇಲ್ಲದ ಕನ್ನಡ ಪರ ಕಾಳಜಿ ಆಂಗ್ಲರಲ್ಲಿ’ ಎಂಬ ಪ್ರಬಂಧವು ಕನ್ನಡ ಸಾಹಿತ್ಯಕ್ಕೆ ಆಂಗ್ಲ ವಿದ್ವಾಂಸರ ಕೊಡುಗೆ ಅಪಾರವಾದದ್ದು. ನಮ್ಮ ಕನ್ನಡ ಶಬ್ದಕೋಶದ ಪ್ರಕಟಣೆಗೆ ಹರಿದು ಹಂಚಿ ಹೋಗಿದ್ದ ಅಳಿವಿನಂಚಿಗೆ ಹೋಗಿದ್ದ ಪದಸಂಪತ್ತನ್ನು ಉಳಿಸುವ ಕಾರ್ಯದಲ್ಲಿ ಆಂಗ್ಲರ ಪಾತ್ರವು ಮುಖ್ಯವಾಗಿದೆ. ಇನ್ನೂ ಹಲವಾರು ಕಾರ್ಯಗಳಲ್ಲಿ ಇವರ ಕಾಳಜಿಯನ್ನು ನೋಡಬಹುದು. ‘ಭಾರತೀಯರ ಮೇಲೆ ಪಾಶ್ಚಾತ್ಯ ಶಿಕ್ಷಣದ ಪ್ರಭಾವ. ಈ ರೀತಿಯ ಪ್ರಬಂಧದಲ್ಲಿ ಶಿಕ್ಷಣದ ಪರಂಪರೆ ಶಿಕ್ಷಣದಿಂದ ಮಾನವನ ಅಭಿವೃದ್ಧಿ ಸರ್ವತೋಮುಖ ವಿಕಾಸ ಸಾಧ್ಯ ಪಾಶ್ಚಾತ್ಯರ ಶಿಕ್ಷಣ ವ್ಯವಸ್ಥೆ ಭಾರತೀಯರಲ್ಲಿ ಹೇಗೆ ಪ್ರಭಾವ ಬೀರಿದೆ ಎನ್ನುವುದನ್ನು ನಾವು ಕಾಣಬಹುದಾಗಿದೆ.

‘ಭಾರತವನ್ನು ನಲುಗಿಸಿದ ಭೀಕರ ಕ್ಷಾಮಗಳು’ ರಲ್ಲಿಯು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಾಜದಲ್ಲಿ ಉಂಟಾಗುವ ಪ್ರಾಕೃತಿ ಏರುಪೇರುಗಳು ಮಾನವನನ್ನು ನಲುಗಿಸಿರುವ ವಿಷಯ ತಿಳಿಯುತ್ತದೆ.

ಒಟ್ಟಾರೆಯಾಗಿ ‘ಐತಿಹಾಸಿಕ ಇಣುಕು ನೋಟ’ ಎಂಬ ಪ್ರಬಂಧಗಳಲ್ಲಿ ವಿದೇಶಿಯರ ಪ್ರವಾಸಕಥನ. ಸ್ವಾತಂತ್ರö್ಯಕ್ಕಾಗಿ ಅರ್ಪಿಸಿದ ಬಲಿದಾನಗಳು, ಬಡತನ, ರೈಲ್ವೆಸ್ಥಾಪನೆ,ಕನ್ನಡಭಾಷೆಯ ಬಗ್ಗೆ ಕಾಳಜಿ ‘ಗುಡಿ ಕೈಗಾರಿಕ ಅವನತಿ’ ಹೀಗೆ ಹಲವಾರು ವಸ್ತು ವಿಷಯಗಳು ಒಳಗೊಂಡ ಅರ್ಥಪೂರ್ಣವಾದ ಕೃತಿಯು ಪ್ರಕಟಗೊಳ್ಳುತ್ತಿರುವುದು ತುಂಬಾ ಸಂತಸದಾಯಕವಾಗಿದೆ. ಹೀಗೆ ಶ್ರೀ ಶಿವಪ್ಪರವರ ಇನ್ನೂ ಹಲವಾರು ಕೃತಿಗಳು ತಮ್ಮಿಂದ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ ಎಂದು ಆಶಿಸುತ್ತಾ ಈ ಪ್ರಬಂಧ ಸಂಕಲನಕ್ಕೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟ ಶ್ರೀ ಶಿವಪ್ಪರವರಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದೇನೆ.

I-rate ang e-book na ito

Ipalaam sa amin ang iyong opinyon.

Impormasyon sa pagbabasa

Mga smartphone at tablet
I-install ang Google Play Books app para sa Android at iPad/iPhone. Awtomatiko itong nagsi-sync sa account mo at nagbibigay-daan sa iyong magbasa online o offline nasaan ka man.
Mga laptop at computer
Maaari kang makinig sa mga audiobook na binili sa Google Play gamit ang web browser ng iyong computer.
Mga eReader at iba pang mga device
Para magbasa tungkol sa mga e-ink device gaya ng mga Kobo eReader, kakailanganin mong mag-download ng file at ilipat ito sa iyong device. Sundin ang mga detalyadong tagubilin sa Help Center para mailipat ang mga file sa mga sinusuportahang eReader.